ದೇವನಹಳ್ಳಿ: ರೈತರು ಸಹಕಾರ ಸಂಘದಲ್ಲಿ ವ್ಯವಹರಿಸಿ ಸಹಕಾರ ಸಂಘದಲ್ಲಿ ದೊರೆಯುವ ರಸಗೊಬ್ಬರ ಅಗತ್ಯ ವಸ್ತುಗಳನ್ನು ಖರೀದಿಸಿ ರೈತರ ಸಹಕಾರ ಸಂಘದ ಬೆಳವಣಿಗೆಗೆ ಉತ್ತೇಜನ ನೀಡಿ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ದೇವನಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ ರೈತರು ಖಾಸಗಿ ಮಳಿಗೆಗಳಲ್ಲಿ ಖರೀದಿ ಮಾಡದೆ ನಮ್ಮ ಸಹಕಾರ ಸಂಘಗಳಲ್ಲಿ ರಸಗೊಬ್ಬರ ಹಿಂಡಿ ಬೂಸಾ ದಿನಬಳಕೆ ವಸ್ತುಗಳನ್ನು ಖರೀದಿಸಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು,
ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರು ಮತ್ತು ಆಡಳಿತ ಮಂಡಳಿಯವರೊಂದಿಗೆ ಆರೋಗ್ಯಕರ ಚರ್ಚೆ ಮಾಡುವುದು ಸ್ವಾಗತರ್ಹವಾಗಿದೆ ಹಾಗೂ ಸಂಘದ ಸರ್ವ ಸದಸ್ಯರ ಹೆಚ್ಚಿನ ಸಹಕಾರದಿಂದ ಇನ್ನೂ ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯ ರೈತರು ಸಹಕಾರ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಹಕಾರ ರತ್ನ ಪುರಸ್ಕøತ ಜಿಲ್ಲಾ ಸಹಕಾರಯೂನಿಯನ್ ಬ್ಯಾಂಕ್ ನಿರ್ದೆಶಕ ಎ.ಸಿ.ನಾಗರಾಜ್ ಮಾತನಾಡಿ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಗೆ ಸದಸ್ಯರ ಹಾಜರಾತಿಸಾಮಾನ್ಯವಾಗಿ ಕಡಿಮೆ ಇರುತ್ತದೆ ಅದಕ್ಕೆ ಅಪವಾದ ಎಂಬಂತೆ ನಮ್ಮ ತಾಲೂಕು ಸೊಸೈಟಿ ಮಹಾಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಸರ್ವಸದಸ್ಯರೂ ಹಾಜರಾಗುವ ಮೂಲಕ ಸಂಘದ ಒಗ್ಗಟ್ಟನ್ನು ಎತ್ತಿ ತೋರಿಸಿದ್ದಾರೆ,
ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿರುವುದು ಸಂತಸ ತಂದಿದೆ, ರೈತರಿಂದ ರೈತರಿಗಾಗಿಯೇ ಇರುವ ಸಂಘ ಇಷ್ಟು ಪ್ರಗತಿ ಹೊಂದಲು ಹಿಂದೆ ಯಾವ ಶಾಸಕರೂ ಮಾಡಿದರುವಷ್ಟು ಪ್ರ್ರೋತ್ಸಾಹ ಸಹಕಾರವನ್ನು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ನೀಡಿದ್ದಾರೆ ಈ ಸೊಸೈಟಿ ರಾಜ್ಯದಲ್ಲಿಯೇ ಪ್ರಗತಿ ಹೊಂದಿದ ಕೆಲವೇ ಸೊಸೈಟಿಗಳ ಗುಂಪಿಗೆ ಸೇರಲಿದೆ ಎಂದರು.
ಸಂಘದ ಅಧ್ಯಕ್ಷ ಎ.ದೇವರಾಜ್ ಮಾತನಾಡಿ ನಮ್ಮ ಟಿಎಪಿಸಿಎಂಎಸ್ ನಲ್ಲಿ ಈಗಾಗಲೇ ಜನತಾ ಬಜಾರ್ ಇದ್ದು ರೈತರಿಗಾಗಿ ಕೀಟನಾಶಕ ಔಷದ, ರಾಸಾಯನಿಕ ಮಳಿಗೆಹಾಗೂ ಇ ಸ್ಟಾಂಪ್ ಪ್ರಾರಂಭಿಸಲಾಗಿದೆ, ರೈತರುಹೆಚ್ಚಾಗಿ ಸಹಕಾರಿ ಸಂಘಗಳಲ್ಲಿ ವ್ಯವಹಾರವನ್ನು ನಡೆಸಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಸಂಘದ ವ್ಯವಹಾರದಲ್ಲಿ ಕಾರಣಾಂತರಗಳಿಂದ ಪ್ರಸಕ್ತ ಸಾಲಿನಲ್ಲಿನಷ್ಟ ಎದುರಿಸಿದ್ದು ಕೆಲವು ಸಣ್ಣ ದೋಷಗಳಾ ಗಿದ್ದು ಮುಂದೆ ಸರಿಪಡಿಸಿಕೊಂಡು ಹೋಗಲಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ದೇವನಹಳ್ಳಿ ಟಿ.ಎ.ಪಿ.ಸಿ.ಎಂ.ಎಸ್.ಉಪಾಧ್ಯಕ್ಷ ಸಿ.ಈರಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಮುನೇಗೌಡ, ದೇವನಹಳ್ಳಿ ತಾಲೂಕು ಜೆ.ಡಿ.ಎಸ್.ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನಕಾರ್ಯದರ್ಶಿ ಜಿ.ಎ.ರವೀಂದ್ರ, ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ರಮೇಶ್, ಬೆಂ.ಗ್ರಾ.ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಮಂಡಿಬೆಲೆ ರಾಜಣ್ಣ, ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಹುರುಳುಗುರ್ಕಿ ಶ್ರೀನಿವಾಸ್, ಹಾಗೂ ಸಿಬ್ಬಂದಿ ವರ್ಗ ಇದ್ದರು.