ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3-1 ಅಂತರದಿಂದ ಭರ್ಜರಿಯಾಗಿ ಗೆದ್ದಿದ್ದೇ ಗೆದ್ದಿದ್ದು ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿನ ಹೆಸರುಗಳೆಲ್ಲಾ ಮೇಲೆ ಕಳಗಾಗಿವೆ. ಹಾರ್ದಿಕ್ ಪಾಂಡ್ಯ ಅವರು ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಈ ಟೂರ್ನಿಯ ಅದ್ಭುತ ಪ್ರದರ್ಶನದಿದಾಗಿ ಬ್ಯಾಟರ್ ತಿಲಕ್ ವರ್ಮಾ ಅವರು ಟಾಪ್ 10ರೊಳಗೆ ಲಗ್ಗೆಯಿಟ್ಟಿದ್ದು ನಾಯಕ ಸೂರ್ಯಕುಮಾರ್ ಅವರನ್ನು 4ನೇ ಸ್ಥಾನಕ್ಕೆ ತಳ್ಳಿದ್ದಾರೆ.
ಭಾರತ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಮುಗ್ಗರಿಸುತ್ತಿದ್ದರೂ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಮಿಂಚುತ್ತಿದೆ. ಇದು ಇತ್ತೀಚೆಗೆ ಮುಗಿದ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲೂ ಸಾಬೀತಾಗಿದೆ. ಚುಟುಕು ಕ್ರಿಕೆಟ್ ನಲ್ಲಿ ಹರಿಣಗಳನ್ನು ಕಂಗೆಡಿಸಿದ ಟೀಂ ಇಂಡಿಯಾ ಆಟಗಾರರು ಐಸಿಸಿ ರ?ಯಾಂಕಿಂಗ್ ಪಟ್ಟಿಯಲ್ಲೂ ಗಣನೀಯ ಏರಿಕೆ ಕಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸದ್ದು ಮಾಡಿದ್ದ ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಮತ್ತೆ ಒಂದನೇ ಸ್ಥಾನಕ್ಕೆ ಏರಿದ್ದಾರೆ. 3ನೇ ಸ್ಥಾನದಲ್ಲಿದ್ದ ಅವರು ಒಂದನೇ ಸ್ಥಾನಕ್ಕೆ ಏರಿದ್ದು ಒಂದನೇ ಸ್ಥಾನದಲಲ್ಲಿದ್ದ ಆಸ್ಟ್ರೇಲಿಯಾದ ಮರ್ಕಸ್ ಸ್ಟೋನಿಸ್ ಅವರು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.ಇನ್ನು ಟಾಪ್ ಟೆನ್ ಪಟ್ಟಿಯಲ್ಲಿರುವ ಏಕೈಕ ದಕ್ಷಿಅ ಆಫ್ರಿಕಾದ ಆಟಗಾರನೆಂದರೆ ನಾಯಕ ಏಡನ್ ಮಾಕ್ರಂ. ಅವರು ಒಂದು ಸ್ಥಾನ ಏರಿಕೆ ಕಂಡಿದ್ದು 9ನೇ ಸ್ಥಾನದಲ್ಲಿ ಇದ್ದಾರೆ.