ಗಾಯದ ಸಮಸ್ಯೆಗಳು ತಮ್ಮ ಭರವಸೆಯ ವೃತ್ತಿಜೀವನಕ್ಕೆ ಅಡ್ಡಿಯಾಗುವ ಮುನ್ನ ದೇಶದ ವೇಗದ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದ ಭಾರತದ ವೇಗಿ ವರುಣ್ ಆರೋನ್ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ತವರು ರಾಜ್ಯ ಜಾರ್ಖಂಡ್ ತಂಡದ ಅಭಿಯಾನ ಕೊನೆಗೊಂಡ ನಂತರ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ದೇಶೀಯ ಏಕದಿನ ಪಂದ್ಯಾವಳಿಯ ಪ್ರಾಥಮಿಕ ಹಂತವನ್ನು ದಾಟಲು ಜಾರ್ಖಂಡ್ ವಿಫಲವಾದ ನಂತರ 35 ವರ್ಷದ ಆರೋನ್ ಸಾಮಾಜಿಕ ಮಾಧ್ಯಮದಲ್ಲಿಈ ಘೋಷಣೆ ಮಾಡಿದ್ದಾರೆ. ಅದ್ಭುತ ಆರಂಭದ ನಂತರ, ಆರೋನ್ ಫಾಮ್ರ್ ಕಂಡುಕೊಳ್ಳಲು ಹೆಣಗಾಡಬೇಕಾಯಿತು. 2015ರ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವರುಣ್ ವಿಫಲರಾದರು.
ಜನವರಿ 23ರವರೆಗೂ ಕಾದು ನೋಡೋಣ, ಎಲ್ಲ ತಿಳಿಯುತ್ತೆ!: ಟೀಂ ಇಂಡಿಯಾ ಸ್ಟಾರ್ ಆಟಗಾರರಿಗೆ ಸುನಿಲ್ ಗಾವಸ್ಕರ್ ಟಾಂಗ್ ವರುಣ್ ಮನದಾಳದ ಮಾತು
ಕಳೆದ 20 ವರ್ಷಗಳಿಂದ, ನಾನು ವೇಗವಾಗಿ ಬೌಲಿಂಗ್ ಮಾಡುವ ಅವಸರದಲ್ಲಿ ಬದುಕಿದ್ದೇನೆ, ಉಸಿರಾಡಿದ್ದೇನೆ ಮತ್ತು ಅಭಿವೃದ್ಧಿ ಹೊಂದಿದ್ದೇನೆ. ಇಂದು, ಅಪಾರ ಕೃತಜ್ಞತೆಯೊಂದಿಗೆ ನಾನು ಕ್ರಿಕೆಟ್ ಬದುಕಿನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುತ್ತೇನೆ ಎಂದು ಆರೋನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ.