ಕನಕಪುರ: 2022- 23 ಸಾಲಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಠೇವಣಿದಾರರು ನಗರದ ಸಂಗಮ ರಸ್ತೆಯಲ್ಲಿರುವ ರೈತಸೇವಾ ಸಹಕಾರ ಸೊಸೈಟಿಯಲ್ಲಿ ಹಣ ಮತ್ತು ಚಿನ್ನವನ್ನು ಅಡ ಇಟ್ಟಿದ್ದು ಅದನ್ನು ವಾಪಸ್ಸು ಪಡೆಯಲು ಹೋದಾಗ ಭ್ಯಾಂಕಿನಲ್ಲಿ ಸುಮಾರು (೧೯) ಹತ್ತೊಂಬತ್ತು ಕೋಟಿ ರೂಪಾಯಿಗು ಹೆಚ್ಚು ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು.
೨೦೧೮ ರಿಂದ ೨೦೨೩ ರವರೆಗೆ ಗ್ರಾಹಕರಿಗೆ ಯಾವುದೇ ರೀತಿಯ ಸರಿಯಾದ ಮಾಹಿತಿ ನೀಡದೇ, ಆಡಿಟ್ ಕೂಡಾ ಮಾಡದೇ, ಗ್ರಾಹಕರಿಗೆ ವಂಚಿಸಿದ್ದು,ಹಗರಣ ಬೆಳಕಿಗೆ ಬಂದ ಮೇಲೆ ಠೇವಣಿ ಇಟ್ಟಿದ್ದ ಹಲವಾರು ಜನರು ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ, ವಿಧ್ಯಾಭ್ಯಾಸ, ಮದುವೆ, ವ್ಯವಸಾಯ ಹಾಗೂ ದೈನಂದಿನ ಜೀವನ ನಿರ್ವಹಣೆಗೆ ಹಣವಿಲ್ಲದೆ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದ ಠೇವಣಿದಾರರು ತಮ್ಮ ನೋವನ್ನು ತೋಡಿ ಕೊಂಡಿದ್ದಾರೆ.
ಹಗರಣ ನಡೆದು ಒಂದು ವರ್ಷವಾದರೂ ಸರ್ಕಾರ ಕ್ರಮ ಕೈಗೊಳ್ಳದೇ ಇರುವುದುನಮ್ಮ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ ಸಹಕಾರ ಸಚಿವರಾದ ರಾಜಣ್ಣ ರವರುಹಗರಣ ಮಾಡಿರುವ ಮ್ಯಾನೇಜರ್ ಕೆ ಜಿ ರವಿಕುಮಾರ್ ವಿರುದ್ಧ ಇನ್ನು ಕ್ರಮ ಕೈಗೊಂಡಿಲ್ಲ, ಠೇವಣಿದಾರರು ಬ್ಯಾಂಕ್ ನಲ್ಲಿ ಬಂದು ವಿಚಾರಿಸಿದರೆ ಲೆಕ್ಕಪತ್ರ (ಆಡಿಟ್) ನಡೆಯುತ್ತಿದೆ ಎಂಬ ಆರಿಕೆ ಉತ್ತರ ನೀಡುತ್ತಿದ್ದಾರೆ, ನಮ್ಮ ತಾಲ್ಲೂಕಿನವರೆ ಆದ ಮಾನ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಮಧ್ಯ ಪ್ರವೇಶಿಸಿ ನೊಂದ ಠೇವಣಿ ದಾರರಿಗೆ ಪರಿಹಾರ ಸೂಚಿಸಬೇಕು ಎಂದು ಮನವಿ ಮಾಡಿದರು.
ಠೇವಣಿದಾರರು ಮತ್ತು ರೈತರಾದ ಸಾಮಂದಿಗೌಡ ಉರಪ್ ಚಿಕ್ಕಣ್ಣ,ವೈಕುಂಠೇಗೌಡ,ಭಾಗ್ಯಮ್ಮ, ದೇವಮ್ಮ, ಟಿ ಕೃಷ್ಣ, ರಾಮರೆಡ್ಡಿ, ಮಂಚೇಗೌಡ ಸೇರಿದಂತೆ ನೂರಾರು ರೈತರು ಹಾಗೂ ಬ್ಯಾಂಕ್ ನ ಗ್ರಾಹಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.