ಬೆಂಗಳೂರು: ರಾಜಾಜಿನಗರಒಂದನೇ ಹಂತದಲ್ಲಿರುವ ವಾಸನ್ ಐ ಕೇರ್ ಹಾಗೂ ಮಹಾಲಕ್ಷ್ಮಿ ಲೇಔಟ್ ಹಿರಿಯ ನಾಗರಿಕರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಡಯಾಬಿಟಿಸ್ ಅವೇರ್ನೆಸ್ ವಾಕಥಾನ್ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯನವರು ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ವಾಸನ್ ಐ ಕೇರ್ ಆಸ್ಪತ್ರೆ ಆಯೋಜಿಸಿರುವ ಕಾರ್ಯಕ್ರಮ ಉತ್ತಮವಾದದ್ದು ಎಲ್ಲಾ ಆಸ್ಪತ್ರೆಗಳನ್ನು ಜನರಿಗೆ ಇಂತಹ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಡಯಾಬಿಟಿಸ್ ಕಾಯಿಲೆ ತಾಯಿಯ ಗರ್ಭದಲ್ಲಿರುವ ಮಕ್ಕಳಿಗೂ ಬರುವಂತಾಗಿದೆ ಈಗಿನ ನಾವು ತಿನ್ನುವ ಆಹಾರ ಉತ್ತಮ ಗುಣಮಟ್ಟದಲ್ಲ ಇಂದಿನ ಕಾಲದಲ್ಲಿ ಬೆಳೆಯುತ್ತಿದ್ದ ಆಹಾರಕ್ಕೂ ,
ಈಗಿನ ಆಹಾರಕ್ಕೂ ಅಜಗಜಾಂತರವಿದೆ ನಮ್ಮ ದೇಹಕ್ಕೆ ಉತ್ತಮವಾದ ಆಹಾರ ಬೇಕು ಆದರೆ ಈಗ ದೊರೆಯುತ್ತಿಲ್ಲ ನಮ್ಮ ಮತ್ತು ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ ನಮ್ಮ ದೇಹಕ್ಕೆ ಯೋಗ, ವ್ಯಾಯಾಮ ಅತ್ಯಗತ್ಯವಾಗಿದೆ ಯಾವಾಗ ನಮ್ಮ ದೇಹವನ್ನು ದಂಡಿಸುವುದಿಲ್ಲವೋ ಆ ಕಾರಣದಿಂದ ಡಯಾಬಿಟಿಸ್ ಗಳಂತಹ ರೋಗಗಳು ಬರುತ್ತದೆ ಆದ್ದರಿಂದ ನಮ್ಮ ಕ್ಷೇತ್ರದಲ್ಲಿ ಸುಸಜ್ಜಿತ ಉದ್ಯಾನವನ ಹಾಗೂ ವ್ಯಾಯಾಮದ ಉಪಕರಣಗಳನ್ನು ಅಳವಡಿಸಲಾಗಿದೆ ಎಲ್ಲರೂ ಒಂದು ಗಂಟೆ ಸಮಯ ಮಾಡಿಕೊಂಡು ವಾಕ್ ಮತ್ತು ಯೋಗಗಳನ್ನು ಮಾಡುವುದರಿಂದ ಇಂತಹ ಕಾಯಿಲೆಗಳಿಂದ ದೂರವಿರಬಹುದು ಎಂದು ಸಲಹೆ ನೀಡಿದರು.
ಮಹಾಲಕ್ಷ್ಮಿ ಬಡಾವಣೆ ಹಾಗೂ ಗೃಹಲಕ್ಷ್ಮಿ ಬಡಾವಣೆಯಲ್ಲಿ ಹಿರಿಯ ನಾಗರಿಕರಿಗಾಗಿ ಸುಸಜ್ಜಿತ ಕಟ್ಟಡಗಳನ್ನು ನೀಡಿದ್ದೇನೆ,ಹಿರಿಯ ನಾಗರಿಕರು ಒಂದು ತಿಂಗಳಿಗೊಮ್ಮೆಯಾದರೂ ಒಂದು ಕಡೆ ಸೇರಿ ಚರ್ಚಿಸಬೇಕು ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡರೆ ಮನಸುಗಳು ಹಗುರವಾಗುತ್ತದೆ ಇಂತಹ ಒಂದು ಕಾರ್ಯಕ್ರಮಕ್ಕೆ ನಾನು ಒಂದು ದಿನ ಬಿಡು ಮಾಡಿಕೊಂಡು ತಮ್ಮೊಂದಿಗೆ ಸೇರುತ್ತೇನೆ ತಮ್ಮ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಂತಾಗುತ್ತದೆ ಎಂದರು.
ನಮ್ಮ ಕ್ಷೇತ್ರದಲ್ಲಿ ಸುಸಜ್ಜಿತವಾದ ಸರ್ಕಾರಿ ಶಾಲೆಗಳು ಯಾವುದೇ ಕಾರ್ಪೋರೇಟ್ ಶಾಲೆಗಳಿಗಿಂತ ಕಮ್ಮಿ ಇಲ್ಲದಂತೆ ನಿರ್ಮಿಸಲಾಗಿದೆ ಕಮಲಾನಗರದಲ್ಲಿ ಸುಸಜ್ಜಿತವಾದ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.70 ವರ್ಷ ಮೇಲ್ಪಟ್ಟ ವಯಸ್ಕರಿಗೆ ಆರೋಗ್ಯ ಆಯುಷ್ಮಾನ್ ಕಾರ್ಡನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು ನಮ್ಮ ಶಾಸಕರ ಕಛೇರಿ ಮತ್ತು ಗೃಹ ಕಚೇರಿಯಲ್ಲಿ ನೀಡಲಾಗುತ್ತಿದ್ದು ತಾವುಗಳು ಕಚೇರಿಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಹಿರಿಯ ನಾಗರಿಕರು ಪಾಲ್ಗೊಂಡಿದ್ದರು