ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ವತಿಯಿಂದ ಪ್ರಪ್ರಥಮ ಬಾರಿಗೆ ವಿಧಾನಸೌಧದ ಮುಂಭಾಗದ ಮೆಟ್ಟಿಗಳ ಮೇಲೆ ಆಯೋಜಿಸಿದ್ದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದ ಕನ್ನಡ ಡಿಂಡಿಮ ಕಾರ್ಯಕ್ರಮ ಅತ್ಯಂತ ಸೊಗಸಾಗಿ ಮೂಡಿಬಂದಿತು.
ಕಿಕ್ಕೇತಿಯವರ ಜೊತೆ ಬಿ. ವಿ. ಪ್ರದೀಪ್,ಮಧು ಮನೋಹರ,ಟಿ ಎನ್ ಶ್ರೀಧರ್, ಇಂದಿರಾ ಮಯ್ಯ, ಒಳಗೊಂಡAತೆ ನಲವತ್ತಕ್ಕೂ ಹೆಚ್ಚು ಕಲಾವಿದರು ಕನ್ನಡ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು, ಮೊಳಗಲಿ ಮೊಳಗಲಿ ನಾಡಗೀತವು, ಒಂದೇ ಒಂದೇ ಕರ್ನಾಟಕ ಒಂದೇ, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕನ್ನಡವೆಂದರೆ ಬರಿನುಡಿಯಲ್ಲ, ಬಾರಿಸು ಕನ್ನಡ ಡಿಂಡಿಮವ, ಕಲ್ಪ ಕಲ್ಪದಲ್ಲಿ ಕೊನರಿ ಕಂಗೊಳಿಸಲಿ ಕನ್ನಡ,ಏರಿಸಿ ಹಾರಿಸಿ ಕನ್ನಡದ ಬಾವುಟ, ಹೊತ್ತಿತೋ ಹೊತ್ತಿತು ಕನ್ನಡದ ದೀಪ, ನಿಮ್ಮ ಶರಣರಿಗೇ ಶರಣೆಂಬುದ ಕರುಣಿಸು, ಮೊದಲಾದ ಕನ್ನಡ ಗೀತೆಗಳು ನೆರೆದಿದ್ದ ಸಹಸ್ರಾರು ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಯಿತು. ವಾದ್ಯ ಸಹಕಾರದಲ್ಲಿ ಕಾರ್ತಿಕ್ ಪಾಂಡವಪುರ, ರಮೇಶ್, ಜಯಚಂದ್ರ, ಮಹೇಶ್ ಅವರು ಸಹಕರಿಸಿದರು.