ಬೆಂಗಳೂರು: ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿಪ್ರೊ.ಕಿ.ರಂ.ನಾಗರಾಜ ಸಂಸ್ಕತಿ ಪ್ರಶಸ್ತಿಯನ್ನು ಉಪನ್ಯಾಸಕರು ಹಾಗೂ ಜಾನಪದ ವಿದ್ವಾಂಸ ಡಾ.ಟಿ.ಗೋವಿಂದರಾಜು ಅವರಿಗೆ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕವಿಗಳು ಹಾಗೂ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರೊ.ಎಲ್.ಎನ್. ಮುಕುಂದರಾಜ, ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರು ಹಾಗೂ ಕವಿಗಳಾದ ಡಾ.ನಲ್ಲೂರು ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಕೋಶಾಧ್ಯಕ್ಷರಾದ ಪಿ.ಮಲ್ಲಿಕಾರ್ಜುನಪ್ಪ, ಸಹ ಪ್ರಾಧ್ಯಾಪಕರಾದ ಡಾ.ರುದ್ರೇಶ್ ಅದರಂಗಿ ಹಾಗೂ ಕಿ.ರಂ.ಪುತ್ರಿ ಇಂಗ್ಲಿಷ್ ಪ್ರಾಧ್ಯಾಪಕಿ ಕೆ.ಎನ್.ಸಹನ, ಕವಿಗಳು ಹಾಗೂ ಬೆಂ.ವಿ.ವಿ ಪ್ರಾಧ್ಯಾಪಕರಾದ ಕಾ.ವೆಂ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮ ಅಂಗವಾಗಿ ಕವಿಗೋಷ್ಠಿ ಸಹ ನಡೆಯಿತು.