ಚಿಕ್ಕಮಗಳೂರು ಮೂಲದ ಮಿಸ್ ಇಂಡಿಯಾ ವಿಜೇತೆ, `ಅಶ್ವಿನಿ ನಕ್ಷತ್ರ’ ಧಾರವಾಹಿ ಖ್ಯಾತಿಯ ನಟಿ ಡಾ.ಪೂಜಾ ರಮೇಶ್ ಕಿರುತೆರೆ, ಹಿರಿತೆರೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ್ಡಿದ್ದು ಇದೀಗ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಇಪ್ಪತ್ತು ವರ್ಷ ಆಯಿತು. ತಾನು ದುಡಿದ ಹಣ ಪೋಲು ಆಗದೇ ಕೂಡಿಟ್ಟಿದ್ದೆ. `ಸ್ಕೋಡಾ’ ಕಾರನ್ನು ಖರೀದಿ ಮಾಡಿದೆ ಎಂದು ಪತ್ರಕರ್ತರಿಗೆ ಸಿಹಿ ಹಂಚಿದರು. ಸದ್ಯ ತಮಿಳು ಧಾರಾವಾಹಿ ಮತ್ತು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದು, ಎಲ್ಲದರ ವಿವರ ಮುಂದಿನ ದಿನಗಳಲ್ಲಿ ತಿಳಿಸುವೆ ಎಂದರು ಪೂಜಾ.