ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಕಚೇರಿ ಬಳಿ ಅಂಬೇಡ್ಕರ್ ನಿಂಧನೆ ಖಂಡಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಬಹುಜನ ಸಮಾಜ ಪಾರ್ಟಿ ಪ್ರತಿಭಟನೆ ನಡೆಸಿದರು.ಬಿಎಸ್ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ನರಸಿಂಹಯ್ಯ ಮಾತನಾಡಿ, ಅಂಬೇಡ್ಕರವರನ್ನು ಅವ ಮಾನಿಸಿದ ಗೃಹ ಮಂತ್ರಿ ಅಮಿತ್ ಶಾ ಈ ತತ್ ಕ್ಷವೇ…ರಾಜೀನಾಮೆಗೆ ನೀಡಬೇಕು.
ಭಾರತದ ಇತಿಹಾಸದಲ್ಲಿ ಪರಿಶಿಷ್ಟ ಮತ್ತು ಶೋಷಿತ ಸಮು ದಾಯಗಳಿಗೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರೂ ಕೂಡಾ ರಕ್ಷಣೆ ಮಾಡಿದ. ಯಾವ ದೇವರೂ ಕೂಡಾ ರಕ್ಷಣೆ ಮಾಡಿದ ಉದಾಹರಣೆ ಇಲ್ಲ. ಆದರೆ ಪರಿಶಿ ಷ್ಟರ, ಮಹಿಳೆಯರ ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ಮಹಾಲೋಕದೃಷ್ಟಿಯ ಮೂಲಕ ಪ್ರತಿದಿನವೂ ಸ್ಮರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಎಸ್ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ನರಸಿಂಹಯ್ಯ, ಕಾರ್ಯದರ್ಶಿ ಬಂಗಾರಪ್ಪ, ಜಿಲ್ಲಾದ್ಯಕ್ಷ ನರಸಿಂಹರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಕೋರಮಂಗಲ ನರಸಿಂಹ ಮೂರ್ತಿ, ಮಹಿಳಾ ಘಟಕದ ಉಪಾದ್ಯಕ್ಷೆ ಮೀನಾಕುಮಾರಿ, ತಾಲ್ಲೂಕು ಅದ್ಯಕ್ಷೆ ಜಯಲಕ್ಷ್ಮೀ, ಯುವ ಮಹಿಳಾ ಘಟಕದ ಅದ್ಯಕ್ಷೆ ಪಲ್ಲವಿ, ಹೊಸಕೋಟೆ ಅದ್ಯಕ್ಷ ಬಲರಾಮು, ತಾಲ್ಲೂಕು ಖಜಾಂಚಿ ಗಂಗಾಧರ ಮುಖಂಡ ರಾದ ಅಂಜನ್ ಬೌಧ, ಆಂಜಿನಪ್ಪ, ಜಯರಾಮು, ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.