ಬೆಂಗಳೂರು: ಬೆಂಗಳೂರು ಮಾಗಡಿರಸ್ತೆ ಮುದ್ದಿನಪಾಳ್ಯ, ಬಿಇಎಲ್ ಲೇಔಟ್ನಲ್ಲಿ ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ಗುಜರಾತ್ ಗಾಂಧಿನಗರ ಸಾಹಿತ್ಯ ಸೇವಾ ಸಂಸ್ಥಾನ ಚಾರಿಟಬಲ್ ಟ್ರಸ್ಟ್ ವತಿಯಿಂದ, ಕರ್ನಾಟಕ ಪ್ರಾಂತ್ಯದ ಅಧ್ಯಕ್ಷರಾದ ಡಾ.ಮಲಕ್ಕಪ್ಪ ಅಲಿಯಾಸ್ ಮಹೇಶ್ರವರ ನೇತೃತ್ವದಲ್ಲಿ, ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಶಿವರಾಜಗೌಡರವರು ವೈದ್ಯಕೀಯ ಸೇವೆಯಲ್ಲಿ ಬಡವರಿಗಾಗಿ 500ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಸಮಾಜಕ್ಕೆ ಅತ್ಯುತ್ತಮ ವೈದ್ಯಕೀಯ ಸೇವೆ ಸಲ್ಲಿಸಿರುವುದರ ಪ್ರಯುಕ್ತ ಡಾ.ಶಿವರಾಜಗೌಡರವರಿಗೆ ಗಾಂಧಿಜಯಂತಿ ಪ್ರಯುಕ್ತ, ಗಾಂಧಿ ನ್ಯಾಷನಲ್ ಪೀಸ್ ಅವಾರ್ಡ್ 2024ರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಚಲನಚಿತ್ರ ನಟಿ-ಕಿರುತೆರೆ ರಂಗಭೂಮಿ ಕಲಾವಿದೆ ಮೈಸೂರು ಮಾಲತಿರವರಿಗೆ ಗಾಂಧಿ ನ್ಯಾಷನಲ್ ಪೀಸ್ ಅವಾರ್ಡ್ 2024ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಖ್ಯಾತ ಜಾನಪದ ಗಾಯಕರು ಚಲನಚಿತ್ರ ನಟರಾದ ಗುರುರಾಜಹೊಸಕೋಟೆ ರವರಿಗೂ ಸಹ ಗಾಂಧಿ ನ್ಯಾಷನಲ್ ಪೀಸ್ ಅವಾರ್ಡ್ 2024ರ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಡಾ ಎಂ.ಶೃತಿ,ಚಲನಚಿತ್ರ ನಿರ್ದೇಶಕ ಪರಮಗುಬ್ಬಿ,ಸಮಾಜಸೇವಕ ಕೆ.ವಿ.ವಿಠಲ್, ರಮೇಶ್,ಮನೋಜ್ಗೌಡ, ಫ್ರಾಂಕ್ಲಿನ್, ಮಹಾಲಕ್ಷ್ಮಿ,ನಮ್ರತಾ,ಅಭಿಲಾಷ್,ದರ್ಶನ್,ಮನು ಸೇರಿದಂತೆ ಅನೇಕರಿದ್ದರು.
ಚಿತ್ರ:ಜಿ.ಎಲ್.ಸಂಪಂಗಿರಾಮುಲು