ಬೆಂಗಳೂರು: ದಿನಾಂಕ 29/6/24 ರಂದು ಬೆಳಗ್ಗೆ ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿರ್ವಸಿಟಿಯೂ ಚನೈ ನಲ್ಲಿನ ಹೋಟೆಲ್ವಿ ಹಿಲ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂತೋಷ್ ಕುಮಾರ್ ರವರು ಸುಮಾರು 8 ವರ್ಷಗಳಿಂದ ಮನೋವೈದ್ಯಕಿಯ ವಿಭಾಗದಲ್ಲಿ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ಆಗಿ ಮನೋರೋಗಿಗಳ ಮನೆಭೇಟಿ ನೀಡಿ ಅವರಿಗೆ ಚಿಕಿತ್ಸೆ,
ಆಪ್ತಸಮಾಲೋಚನೆ, ಮನೋವೈದ್ಯಕಿಯ ಶಿಕ್ಷಣ ನೀಡಿ ಅನುಸರಣೆಯನ್ನು ಮಾಡುತ್ತಿದ್ದಾರೆ ಇದ್ದಲ್ಲದೆ,ವೃದ್ದರು, ನಿರಾಶ್ರಿತರು, ದೀನ ದಲಿತರಿಗೆ ಸಹಾಯಸ್ತಾ ತೋರಿರುವಿದಲ್ಲದೆ, ಬಡ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ, ಅಂಗವಿಕಲರಿಗೆ ಹಣ್ಣು ಹಂಪಲು ವಿತರಣೆ, ಪರಿಸರ ದಿನಚಾರಣೆ ಪ್ರಯುಕ್ತ ಸಸಿಗಳ ವಿತರಣೆ, ಮಹಿಳಾ ದಿನಚಾರಣೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರುಗಳಿಗೆ ಸನ್ಮಾನಿಸುವ ಸಾಮಾಜಿಕ ಕಾರ್ಯವನ್ನ ಮಾಡುತ್ತಿದ್ದಾರೆ.
ಆದ್ದರಿಂದ ಇವರ ಈ ಅನುಪಮ ಸೇª ಗುರುತಿಸಿ ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿವರ್ಸಿಟಿ ವತಿಯಿಂದ ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಇವರಿಗೆ “ನ್ಯಾಷನಲ್ ಯೂತ್ ಐಕಾನ್ ಅವಾರ್ಡ್” ಗೆ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಡಾ. ಕುಮಾರ್ ಗುರು ಮಾಜಿ ಕೇಂದ್ರ ಸರ್ಕಾರದ ವಕೀಲರು ಹೈಕೋರ್ಟ್ ಬೆಂಗಳೂರು ರವರು ಮತ್ತು ಚಲನ ಚಿತ್ರ ನಿರ್ದೇಶಕರು, ಬರಹಗಾರರಾದ ಡಾ. ಗುಣವಂತ ಮಂಜುನಾಥ್ ಮತ್ತು ಏಷಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ಯೂನಿರ್ವಸಿಟಿಯ ಸಂಸ್ಥಾಪಕರಾದ ಮಾಸ್ಟರ್ ಬಾಬು ವಿಜಯನ್ ಸೇರಿದಂತೆ ಅನೇಕರು ಹಾಜರಿದ್ದರು.
ಸಂತೋಷ್ ಕುಮಾರ್ ರವರಿಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಪೊಲೀಸ್ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ದಾನಪ್ಪನವರು, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಮೂರ್ತಿವಾಣಿ ಪತ್ರಿಕೆಯ ಸಂಪಾದಕರಾದ ಎನ್. ಮಲ್ಲೇಶ್ ಕುಕ್ಕವಾಡ, ಸಹಾಯವಾಣಿ ಮತ್ತು ಪವಿತ್ರ ಪ್ರಜಾ ಪತ್ರಿಕೆಯ ಸಂಪಾದಕರಾದ ಎಸ್ ಕೆ ಒಡೆಯರ್ ಮತ್ತು ಎ. ಆರ್. ಎಂ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಪಕಾರದ ಅಂಜಿನಪ್ಪ ರವರು ಸೇರಿದಂತೆ ಸಂತೋಷ್ ಕುಮಾರವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.