ಬೆಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನವಾದವತಿಯಿಂದ ಯಲಹಂಕದ ಬೆಳ್ಳಳ್ಳಿ ಕ್ರಾಸ್ ನ ಟಿಪುö್ಪ ಸರ್ಕಲ್ ನಲ್ಲಿ ಸ್ವಾತಂತ್ರ÷್ಯ ಹೋರಾಟಗಾರ ಟಿಪುö್ಪ ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಟಿಪುö್ಪ ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಬುಲ್ಲೆಟ್ ರಿಯಾಜ್,ಮಹಿಳಾ ಘಟಕ ಅಧ್ಯಕ್ಷೆ ಶಬಜಾನ್ ಸೇರಿದಂತೆ ನೂರಾರು ಕಾರ್ಯಕರ್ತರು,ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಟಿಪುö್ಪ ಸುಲ್ತಾನ್ ಮಹಾನ್ ಸ್ವಾತಂತ್ರ÷್ಯ ಹೋರಾಟಗಾರರಾಗಿದ್ದು ಮೈಸೂರು ಸಂಸ್ಥಾನ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ, ಅವರು ಜಾತ್ಯತೀತ ವ್ಯಕ್ತಿಯಾಗಿದ್ದರು ಎಂದು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಬುಲ್ಲೆಟ್ ರಿಯಾಜ್ ತಿಳಿಸಿದರು.
ಡಿಎಸ್ಎಸ್ನಿಂದ ಬೆಳ್ಳಳಿ ಕ್ರಾಸ್ ಟಿಪುö್ಪ ಸರ್ಕಲ್ನಲ್ಲಿ ಟಿಪುö್ಪ ಜಯಂತಿ ಆಚರಣೆ
