ಬೆಳಗಾವಿ: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆ ಕಾಂಗ್ರೆಸ್ (Congress) ಪಕ್ಷದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಡಿಸಿಎಂ ಹೇಳಿಕೆಗೆ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ (Muniyappa) ಡಿಸಿಎಂ ಹೇಳಿಕೆ ಸತ್ಯ ಒಪ್ಪಂದ ಆಗಿದೆ ಎಂದು ಹೇಳಿದ್ರು. ಇದೀಗ ಈ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಯತ್ನಾಳ್ ಅವರು, ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆದರೇ ದೇವರೇ ಗತಿ… ಅವರು ರಾಜ್ಯದ ಉಪ ಮುಖ್ಯಮಂತ್ರಿ ಆಗಿರೋದೇ ದುರ್ದೈವದ ಸಂಗತಿ ಏಕೆಂದರೆ, ಇಂತಹ ಭ್ರಷ್ಟ, ಲೂಟಿ ಮಾಡುವ ಶಿವಕುಮಾರ್ ರನ್ನು ಎಲ್ಲಿಯೂ ನೋಡಿಲ್ಲ ಎಂದು ಡಿಸಿಎಂ ಡಿಕೆಶಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಕೊವಿಡ್ ಹಗರಣದಲ್ಲಿ ಯಾರು ಯಾರು ಪಾಲು ಇದ್ದಾರೋ ಅವರೆಲ್ಲರ ಹೆಸರು ಹೊರಗೆ ಬರಲಿ, ಇದರಲ್ಲಿ ಕಾಂಗ್ರೆಸ್ ನವರು ಇರಬೇಕು. ನಾನು ಅವತ್ತೇ ಹೇಳಿದ್ದೆ ತನಿಖೆ ಆಗಲಿ ಎಂದು ಯತ್ನಾಳ್ ಹೇಳಿದರು.
ಇಂದು ಆರಂಭವಾಗಿರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಹಗರಣಗಳ ಅಸ್ತ್ರ ಬಳಸಲು ಸಜ್ಜಾಗಿವೆ. ಇದಕ್ಕೆ ಕೌಂಟರ್ ಆಗಿ ಸರ್ಕಾರ ಕೋವಿಡ್ ಮೇಲಿನ ಮೈಕೆಲ್ ಡಿ’ಕುನ್ಹಾ ವರದಿಯನ್ನು ಮುಂದಿಡಲಿದೆ. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಮೇಲಿನ ಅವ್ಯವಹಾರ ಆರೋಪವನ್ನು ಪ್ರಸ್ತಾಪಿಸಿ ಬಿಜೆಪಿ ಭ್ರಷ್ಟಾಚಾರ ಆರೋಪಕ್ಕೆ ತಿರುಗೇಟು ನೀಡಲಿದೆ ಎಂದರು.