ಹುಬ್ಬಳ್ಳಿ: ರಾಜ್ಯದ ಉಪ ಮುಖ್ಯಮಂತ್ರಿ ಯಾಗಿರುವ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾ ಬೇಕೆನ್ನುವುದು ನನ್ನ ಕನಸು ಎಂದು ಹುಬ್ಬಳ್ಳಿಯ ವರೂರಿನ ಗುಣಧರನಂದಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವ ಕುಮಾರ್ ಸಿಎಂ ಆಗುವುದು, ಜೈನ ನಿಗಮ
ಸ್ಥಾಪನೆ ಇವರೆಡೂ ನನ್ನ ಕನಸು. ಎಷ್ಟೇ ಕಾಟ ಇರಲಿ, ಎಷ್ಟೇ ಸಂಕಟ ಇರಲಿ ಡಿಕೆಶಿ ಸಿಎಂ ಆಗುತ್ತಾರೆ.
ಇದು ನಮ್ಮ ಭವಿಷ್ಯ ವಾಣಿ ಎಂದ ವರೂ ರಿನ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ.ಮುಂದಿನ ಅವಧಿಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಡಿ.ಕೆ. ಶಿವ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಕಷ್ಟಪಟ್ಟಷ್ಟು ಯಾರೂ ಪಟ್ಟಿಲ್ಲ. ಕಾಂಗ್ರೆಸ್ಗೆ ಮರುಜೀವ ಕೊಟ್ಟಿದ್ದಾರೆ, ಇದನ್ನು ಕರ್ನಾಟಕ ಜನರು ಮರೆತಿಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆಗುವುದು ನಮ್ಮ ಕನಸು ಎಂದು ಜೈನಮುನಿ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ. ಜೈನ ಸಮುದಾಯಕ್ಕೆ ಕೊಡುವುದು ಗೊತ್ತು, ಬೇಡುವುದು ಗೊತ್ತಿಲ್ಲ. ಆದರೆ, ಈಗ ನಿಗಮ ಮಂಡಳಿಗೆ ಬೇಡುತ್ತಿದ್ದೇವೆ, ಇದು ಸಮಾಜದ ಅಪೇಕ್ಷೆ ಎಂದಿದ್ದಾರೆ. ಈ ವೇಳೆ ವೇದಿಕೆ ಮೇಲಿನ ಎಲ್ಲಾ ಆಚಾರ್ಯರು, ಜೈನಮುನಿಗಳು ಕೈ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಶೀರ್ವದಿಸಿದ್ದಾರೆ.