ಬೆಂಗಳೂರು: ಡಿಕೆ ಸುರೇಶ್ ತಂಗಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಐಶ್ವರ್ಯ ಗೌಡ ಹಾಗೂ ವಿನಯ್ ಕುಲಕರ್ಣಿ ನಡುವೆ ವ್ಯವಹಾರಿಕ ಸಂಬಂಧ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಐಶ್ವರ್ಯ ಹಾಗೂ ಪತಿ ಹರೀಶ್ ಹೆಸರಿನಲ್ಲಿದ್ದ ಮೂರು ಐಷಾರಾಮಿ ಕಾರುಗಳಾದ ಔಡಿ, ಬಿಎಂಡಬ್ಲ್ಯೂ, ಹಾಗೂ ಫಾರ್ಚುನರ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸುಮಾರು 60 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರು ಸೀಜ್, ವಂಚನೆ ಮಾಡಿದ್ದ ಹಣದಿಂದ ಕಾರು ಖರೀದಿಸಿದ್ದ ಆರೋಪ ಹಾಗೂ ಅದನ್ನ ಗಿಫ್ಟ್ ಆಗಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಐಶ್ವರ್ಯ ನೀಡಿದ್ದರು ಎಂದು ತಿಳಿದುಬಂದಿದೆ. ಇದೀಗ ವಿನಯ್ ಕುಲಕರ್ಣಿ ಬಳಿಯಿಂದ ಕಾರು ವಶಕ್ಕೆ ಪಡೆಯಲಾಗಿದೆ. ಆರ್ ಆರ್ ನಗರ ಪೊಲೀಸ್ ಠಾಣೆ ಆವರಣದಲ್ಲಿ ಕಾರನ್ನು ನಿಲ್ಲಿಸಲಾಗಿದೆ.