ಬೆಂಗಳೂರು: ಇಂದು ನಿವೃತ್ತರಾಗಲಿರುವ ಡಿಜಿಪಿ ಕಮಲ್ ಪಂತ್ ಅವರು, ದಿವಂಗತ ಮೇರು ನಟ ಪುನೀತ್ ರಾಜಕುಮಾರ್ ಹಾಗೂ ಅವರ ತಂದೆ ಡಾ.ರಾಜಕುಮಾರ್ ಅವರು ಮೃತರಾದ ಸಮಯದಲ್ಲಿ ಆಗಿದ್ದ ಘಟನೆಗಳನ್ನು ಸ್ಮರಿಸಿದರು.
ಶ್ವಾನದಳ, ಆಶ್ವಾದಳ ಮತ್ತು 10 ಸಿವಿಲ್ ಮತ್ತು ಕೆಎಸ್ಆರ್ಪಿ ಹಾಗೂ ಸಂಚಾರಿ ಪೊಲೀಸ್ ರವರುಗಳ ಮಾರ್ಚ್ ಫಾಸ್ಟ್ನ ಗೌರವ ವಂದನೆ ಸ್ವೀಕರಿಸಿದರು.
ಕೆಎಸ್ಆರ್ಪಿ 3ನೇ ಕ್ರೀಡಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ವಂದನೇ ಸ್ವೀಕರಿಸಿ ಮಾತನಾಡಿದ ಕಮಲ್ ಪಂತ್ ರವರು ತಮ್ಮ 34 ವರ್ಷದ ದೀರ್ಘ ಸೇವಾ ಅವಧಿಯಲ್ಲಿ ಅನುಭವ ಪಡೆದಿದ್ದನ್ನು ಕಿರಿಯರಿಗೆ ತಿಳಿ ಹೇಳಿದರು.
1990ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾದ ಕಮಲ್ ಪಂತ್ ರವರು ಮೂಲತಹ ಡೆಹರಾ ಡಾನ್ ರವರಾಗಿದ್ದು 1964 ಜೂನ್ ನಲ್ಲಿ ಜನಿಸಿರುತ್ತಾರೆ.
ತಮ್ಮ ಪದವಿಯನ್ನು ಮುಗಿಸಿ ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಐಪಿಎಸ್ ಎಕ್ಸಾಮ್ ಬರೆದು ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಯಾದರು.
ಸಿಬಿಐ, ಬೆಂಗಳೂರಿನ ನಗರ ಪೊಲೀಸ್ ಕಮಿಷನರ್ ಹಾಗೂ ಇನ್ನೂ ಇತರ ಹುದ್ದೆಗಳನ್ನು ಅಲಂಕರಿಸಿ ಯಾವುದೇ ಕಪ್ಪು ಚುಕ್ಕೆ ತಮಗೂ ಹಾಗೂ ಇಲಾಖೆಗೂ ಬಾರದಂತೆ ನಡೆದುಕೊಂಡು ಬಂದರು. ಹಾಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳದ ಮಹಾನಿರ್ದೇಶಕರಾಗಿ ರುತಾರೆ.ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮಹಾನ್ ನಗರ ಪೊಲೀಸ್ ಆಯುಕ್ತ ದಾಯನಂದ್ ರವರು ಸೇರಿದಂತೆ ಎಲ್ಲಾ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.