ಬೆಂಗಳೂರು: ನಗರದೊಳಗಿನ ಹಸಿರು ಸಮೂಹ ಸಾರಿಗೆಗಾಗಿ ಹೊಚ್ಚ ಹೊಸ ಟಾಟಾ ಅಲ್ಟ್ರಾ ಇವಿ 7ಎಂ ಟಾಟಾ ಮೋಟಾರ್ಸ್ ಅನ್ನು ಅನಾವರಣಗೊಳಿಸಿದೆ.
ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಸುರಕ್ಷಿತ, ಸ್ಮಾರ್ಟ್ ಮತ್ತು ಸುಸ್ಥಿರ ಸಮಗ್ರ ಸಮೂಹ ಸಾರಿಗೆ ಉತ್ಪನ್ನಗಳನ್ನು ಪ್ರದರ್ಶಿಸುವ 3 ದಿನಗಳ ದ್ವೈವಾರ್ಷಿಕ ಕಾರ್ಯಕ್ರಮವಾದ ಪ್ರವಾಸ್ 4.0 ಕಾರ್ಯಕ್ರಮದಲ್ಲಿ ತನ್ನ ಅತ್ಯಾಧುನಿಕ ಸಮೂಹ ಸಾರಿಗೆ ಉತ್ಪನ್ನಗಳ ಆಕರ್ಷಕ ಶ್ರೇಣಿಯನ್ನು ಪ್ರದರ್ಶಿಸಿತು.
ಹೊಸ ಬಸ್ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ನ ಉಪಾಧ್ಯಕ್ಷ ಮತ್ತು ಕಮರ್ಷಿಯಲ್ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಮುಖ್ಯಸ್ಥ ಆನಂದ್ ಎಸ್ ಅವರು, “ಸುರಕ್ಷಿತ, ಸ್ಮಾರ್ಟ್ ಮತ್ತು ಸುಸ್ಥಿರಸಾರಿಗೆ ಎಂಬ ಥೀಮ್ ಹೊಂದಿರುವ ಪ್ರವಾಸ್ 4.0 ಕಾರ್ಯಕ್ರಮವು ನಮ್ಮ ದೂರದೃಷ್ಟಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಈ ಕಾರ್ಯಕ್ರಮವು ಪಾಲುದಾರರ ಜೊತೆ ಮಾತುಕತೆಯಲ್ಲಿ ತೊಡಗಿಕೊಳ್ಳಲು ಮತ್ತು ನಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಪ್ರದರ್ಶಿಸಲು ನಮಗೆ ವಿಶಿಷ್ಟ ಅವಕಾಶ ಒದಗಿಸಿ ಕೊಟ್ಟಿದೆ.
ನಾವು ಹೆಮ್ಮೆಯಿಂದ ನಮ್ಮ ವಿವಿಧ ರೀತಿಯ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದೇವೆ. ಎಲೆಕ್ಟ್ರಿಕ್ ಬಸ್ ವಿಭಾಗದಲ್ಲಿ ನಮ್ಮ ಹೊಸ ಉತ್ಪನ್ನವಾದ ಅಲ್ಟ್ರಾ ಇವಿ 7ಎಂ ಒಳಗೊಂಡಂತೆ ವಿವಿಧ ವಿಭಾಗಗಳಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ನಾವು ಸಂತೋಷ ಪಡುತ್ತೇವೆ. ನಮ್ಮ ಹೊಸ ಉತ್ಪನ್ನವು ಮಹಾನಗರಗಳು ಮತ್ತು ಸಣ್ಣ ನಗರಗಳು ಎರಡಕ್ಕೂ ಸೂಕ್ತವಾಗಿ ಹೊಂದಿಕೊಳ್ಳುತ್ತವೆ ಮತ್ತು ನಮ್ಮ ಗ್ರಾಹಕರ ವಿಶಿಷ್ಟ ಅಗತ್ಯಗಳನ್ನು ಪೂರೈಸುತ್ತವೆ. ಪ್ರವಾಸ್ 4.0 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಾವು ನಮ್ಮ ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಕೆಯ ಸಾಮಥ್ರ್ಯ ಹೊಂದಿರುವ ಮತ್ತು ಲಾಭ ಒದಗಿಸುವ ಹೊಸ ರೀತಿಯ, ಸಮರ್ಥ ಮತ್ತು ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ಬದ್ಧತೆಯನ್ನು ಸಾರಿದ್ದೇವೆ” ಎಂದು ಹೇಳಿದರು.