ಬೆಂಗಳೂರು: ಪೊಲೀಸ್ ಇಲಾಖೆ ಯಲ್ಲಿ ನಡೆಯು ತ್ತಿರುವ ಭ್ರಷ್ಟಾಚಾರ ಅಥವಾ ಇನ್ನು ಇತರೆ ಕಾರಣ ಅಥವಾ ಕಿರುಕುಳದಿಂದ ಅಬ್ದುಲ್ ಅಹಮದ್ ಡಿಸಿಪಿ ರವರು ತಮ್ಮ ರಾಜೀನಾಮೆಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ ಎಂದು ಮೂಲಗಳು
ತಿಳಿಸಿವೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಕೆ ಎಸ್ ಪಿ ಎಸ್ ಪರೀಕ್ಷೆ ಬರೆದು ತೇರ್ಗಡೆಯಾಗಿ ತಾಲೂಕು ಮಟ್ಟದ ಡಿವೈಎಸ್ಪಿ ಅಧಿಕಾರಿಯಾಗಿ…ಸೇವೆ ಸಲ್ಲಿಸಿ 2012ರಲ್ಲಿ ಐಪಿಎಸ್ ಬಡ್ತಿ ಪಡೆದು ಬೆಂಗಳೂರು ನಗರದ ವೈಟ್ಫೀಲ್ಡ್ ಡಿಸಿಪಿ ಮತ್ತು ಹಾಲಿ ಅಪರಾಧ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಅಹದ್ ರವರು ಸರ್ಕಾರಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುತ್ತಾರೆ.ಆದರೆ ಹಿರಿಯ ಅಧಿಕಾರಿಗಳು ಅವರ ಮನ ಒಲಿಸಿ ರಾಜೀನಾಮೆ ಪತ್ರವನ್ನು ಹಿಂಪಡೆಯಲು ತಿಳುವಳಿಕೆ ನೀಡಿ ಪ್ರಯತ್ನಿಸುತ್ತಿರುತ್ತಾರೆ.