ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮೈಸೂರ್ ರಸ್ತೆಯ ಸಿಎಆರ್ ಕೇಂದ್ರ ಸ್ಥಾನದಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಸಾರ ಫಾತಿಮಾ ರವರ ನೇತೃತ್ವದಲ್ಲಿ ಮಹಿಳಾ ಪೊಲೀಸ್ ಕವಾಯತು ನಡೆಯಿತು.ಇಂದು ಬೆಳಿಗ್ಗೆ ಎಂಟು ಗಂಟೆಗೆ ನಡೆದ ಕವಾಯತಿನಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಮಹಿಳಾ ಪೊಲೀಸ್ ವತಿಯಿಂದ ಕವಾಯತು ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ಮತ್ತು ರಾಣಿ ಚೆನ್ನಮ್ಮ ಪಡೆಯಿಂದ ಪ್ರದರ್ಶಿಸುವ ಕವಾಯತು ಸಹ ವೀಕ್ಷಿಸಿದರು.
10 ತಂಡದ 330 ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಕವಾಯತಿನಲ್ಲಿ ಪಾಲ್ಗೊಂಡಿದ್ದರು.ನಗರ ಪೊಲೀಸ್ ಆಯುಕ್ತರ ಜೊತೆಯಾಗಿ ಅವರ ಧರ್ಮಪತ್ನಿ ಡಾಕ್ಟರ್ ಶಶಿಕಲಾ, ಇವರು ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ, ಇವರು ಸಹ ಕವಾಯಿತಿನಲ್ಲಿ ಪಾಲ್ಗೊಂಡಿದ್ದರು. ರಾಣಿ ಚೆನ್ನಮ್ಮ ಪಡೆಯಿಂದ ಕವಾಯಿತು ಪ್ರದರ್ಶನ ನಡೆಯಿತು.
126 ಉತ್ತಮ ಮಹಿಳಾ ಸಂಚಾರಿ ಪೊಲೀಸ್, ವಯರ್ಲೆಸ್ ವಿಭಾಗದಲ್ಲಿ, ಸೈಬರ್ ಕ್ರೈಂ ವಿಭಾಗದಲ್ಲಿ, ಅಪರಾಧ ತನಿಕಾ ಸಹಾಯಕರಾಗಿ ಕೆಲಸ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ವಿಶೇಷವಾಗಿ ಪೊಲೀಸ್ ಠಾಣಾ ಮಟ್ಟದಲ್ಲಿ ಕೌಟುಂಬಿಕ ಕಲಹದಲ್ಲಿ ಸಹಾಯ ನೀಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶೇಷವಾಗಿ ಪ್ರಶಂಸನಾ ಪತ್ರ ನೀಡಿ ಆಯುಕ್ತ ದಾಯಾನಂದ್ ರವರು ಸನ್ಮಾನಿಸಿದರು .
ಇದಲ್ಲದೆ ಪರಿಹಾರ ಮತ್ತು ಯುನೈಟೆಡ್ ಬೆಂಗಳೂರು ಇವರ ಸಹಯೋಗದಿಂದ ಸಾರ್ವಜನಿಕ ಮಹಿಳೆಯರಲ್ಲಿ ಆಯ್ದ ಕೆಲವರಿಗೆ 32 ಎಲೆಕ್ಟ್ರಾನಿಕ್ ಈ ಆಟೋ, ಚಾಯ್ ಬಂಡಿ ಮತ್ತು 10 ಹೊಲಿಗೆ ಯಂತ್ರವನ್ನು ಸಹ ನೀಡಿದರು .