ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಸರಿ ಗ ಮ ಪ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ. ಈಗಾಗಲೇ ಸರಿ ಗ ಮ ಪ ಶೋ ಕನ್ನಡ ಚಿತ್ರರಂಗಕ್ಕೆ ಸಂಜಿತ್ ಹೆಗ್ಡೆ, ಪೃಥ್ವಿ ಭಟ್ ಮತ್ತು ಜಸ್ಮರನ್ ಸಿಂಗ್ ಐಶ್ವರ್ಯ ರಂಗರಾಜನ್, ಆಶಾ ಭಟ್, ಹನುಮಂತು, ದಿವ್ಯ ಹೆಗ್ಡೆ, ಶ್ರೀನಿಧಿ ಶಾಸ್ತ್ರೀ, ಚೆನ್ನಪ್ಪ, ಸುನಿಲ್ ಗುಜಗೊಂಡ, ಸುಹಾನಾ, ರಜತ್ ಹೆಗ್ಡೆ, ಹರ್ಷ, ದರ್ಶನ್, ಕಂಬದ್ ರಂಗಯ್ಯ, ಇಂಪನಾ ಜಯರಾಜ್, ಜ್ಞಾನ ಗುರುರಾಜ್, ಸುಪ್ರೀತ್, ನಿಹಾಲ್, ಅಶ್ವಿನ್ ಶರ್ಮ ರಂತಹ ಪ್ರತಿಭಾವಂತ ಗಾಯಕರನ್ನ ಕೊಡುಗೆಯಾಗಿ ನೀಡಿದ್ದನ್ನು ಸ್ಮರಿಸಬಹುದು.
ಈ ಸೀಸನ್ ನಲ್ಲಿ 6 ವರುಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸ ಬಹುದಾಗಿದ್ದು ಸ್ಪರ್ಧೆಯು ಮತ್ತಷ್ಟು ಇಂಟೆರೆಸ್ಟಿಂಗ್ ಆಗುವುದರಲ್ಲಿ ಯಾವುದೇ ಡೌಟ್ ಇಲ್ಲ ಎನ್ನುತ್ತಾರೆ ಝೀ ಟಿವಿ ಮುಖ್ಯಸ್ಥ ದೀಪಕ್.ಅರ್ಜುನ್ ಜನ್ಯ , ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿರುವುದು ಈ ಆವೃತ್ತಿಯ ಮತ್ತೊಂದು ಹೈಲೈಟ್. ವಾರ್ತಾ ಗೋಷ್ಠಿ ಯಲ್ಲಿ ಗಾಯಕರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿದರು.
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಈ ಸೀಸನ್ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.ಈ ಶೋನಲ್ಲಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಿರದೇ ಅವರ ಸ್ಪೂರ್ತಿದಾಯಕ ಕಥೆಗಳು ಕೂಡ ವೀಕ್ಷಕರನ್ನು ಪ್ರೇರೇಪಿಸಲಿದೆ ಎನ್ನುತ್ತದೆ ಜೀ ತಂಡ.ಕಾರ್ಯಕ್ರಮದಲ್ಲಿ ಕರ್ನಾಟಕ ಮಾತ್ರ ಅಲ್ಲದೆ ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಈ ಬಾರಿ ವೀಕ್ಷಕರು ಜೀ ಕನ್ನಡ ‘ಸರಿಗಮಪ’ ಇನ್ಸಾಗ್ರಾಂ ನ ಅಧಿಕೃತ ಪೇಜ್ ನಲ್ಲಿ ಪೋಸ್ಟ್ ಮಾಡುವ ಆಡಿಷನ್ ವಿಡಿಯೋ ಗಳನ್ನು ಲೈಕ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ ಮತ್ತು ಅತೀಹೆಚ್ಚು ಲೈಕ್ ಗಳಿಸಿರುವ ಸ್ಪರ್ಧಿಗಳು ಮೆಗಾ ಆಡಿಷನ್ ಗೆ ಬಡ್ತಿ ಪಡೆದಿದ್ದಾರೆ ಎಂದು ವಾರ್ತಾಗೋಷ್ಠಿಯಲ್ಲಿ ತಿಳಿಸಲಾಯಿತು.
ಕನ್ನಡ ಚಿತ್ರರಂಗಕ್ಕೆ ಹಲವಾರು ಹಿಟ್ ಗಾಯಕರನ್ನು ನೀಡಿರುವ ಈ ‘ಸರಿಗಮಪ’ ಸಿಂಗಿಂಗ್ ರಿಯಾಲಿಟಿ ಶೋ ಮತ್ತಷ್ಟು ಹೊಸತನದೊಂದಿಗೆ ಮನರಂಜಿಸಲು ಇದೇ ಡಿಸೆಂಬರ್ 14ರಿಂದ 7:30ಕ್ಕೆ ವೀಕ್ಷಕರ ಮುಂದೆ ಬರುತ್ತಿದೆ.