ಚಿಕ್ಕಬಳ್ಳಾಪುರ: ಶ್ರೀ ದತ್ತಾತ್ರೇಯ ಸಮಾಜ ಸಾಧುಮಠ ಟ್ರಸ್ಟ್ ವತಿಯಿಂದ ಇದೇ ಡಿ. 9 ರಿಂದ ಡಿ. 15ರ ವರೆಗೆ ಏಳು ದಿನಗಳ ಕಾಲ ಶ್ರೀ ದತ್ತಾತ್ರೇಯ ಸ್ವಾಮಿಯವರ 65ನೇ ವರ್ಷದ ಜಯಂತಿಯ ಸಪ್ತಾಹ ಕಾರ್ಯಕ್ರಮನ್ನು ಹಮ್ಮಿಕೊಂಡಿದೆ ಎಂದು ಶ್ರೀ ದತ್ತಾತ್ರೇಯ ಸಮಾಜ ಸಾಧುಮಠ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ವಿ ತಿಳಿಸಿದರು.
ಅವರು ನಗರದ ಸಾಧುಬಾವಿ ರಸ್ತೆಯಲ್ಲಿನ ದತ್ತಾತ್ರೇಯ ಸಮಾಜ ಸಾಧುಮಠ ಟ್ರಸ್ಟ್ ಕಾರ್ಯಾಲಯದಲ್ಲಿ ನಡೆದ ದತ್ತಾತ್ರೇಯಸ್ವಾಮಿ ಜಯಂತಿ ಸಪ್ತಹ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿ ವರ್ಷವೂ ದತ್ತಾತ್ರೇಯ ಸ್ವಾಮಿಯವರ ದತ್ತ ಜಯಂತಿ ಸಪ್ತಾಹ ಕಾರ್ಯಕ್ರಮವನ್ನು ಭಕ್ತ ಮಹಾಶಯರ ಸಹಕಾರದೊಂದಿಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಅದರಂತೆ ಪ್ರಸಕ್ತ ಸಾಲಿನಲ್ಲಿಯೂ ಜಯಂತಿಯ ಸಪ್ತಾಹ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಶ್ರದ್ಧಾ ಭಕ್ತಿಯಿಂದ ನಡೆಸಲು ಟ್ರಸ್ಟ್ ತೀರ್ಮಾನಿಸಿದ್ದು ಸಪ್ತಾಹ ಕಾರ್ಯಕ್ರಮದಲ್ಲಿ ನಡೆಯುವ ಪ್ರತಿದಿನದ ಪೂಜಾ ಕೈಂಕರ್ಯಗಳಲ್ಲಿ ಎಲ್ಲಾ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿ ಮಾಡಿದರು.
ಜಯಂತಿ ಸಪ್ತಾಹದ ಮೊದಲ ದಿನದ ಡಿ 9 ರಿಂದ ಕೊನೆಯ ಡಿಸೆಂಬರ್ 15ರ ವರೆಗೆ ಪ್ರತಿದಿನ ಪ್ರಾತಃಕಾಲ 7ರಿಂದ 8:30 ಒಳಗೆ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಮಂತ್ರಪುಷ್ಪ, ರಾಜಾಶೀರ್ವಾದ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಇರುತ್ತದೆ ಅಲ್ಲದೆ ಪ್ರತಿದಿನ ಸಂಜೆ 6:30 ಗಂಟೆಯಿಂದ ರಾತ್ರಿ 8:30 ಗಂಟೆ ವರೆಗೆ ಆಧ್ಯಾತ್ಮಿಕ ಪ್ರವಚನಗಳು ಪಾರಾಯಣ ಪೂಜೆ ಮತ್ತು ಪ್ರಸಾದ ವಿನಿಯೋಗ ಮಾಡಲಾಗುವುದು ಈ ಬಾರಿ ವಿಶೇಷವಾಗಿ ಏಳು ದಿನಗಳ ಕಾಲ ಆಧ್ಯಾತ್ಮಿಕಪ್ರವಚನದಲ್ಲಿ `ಗುರು ಚರಿತ್ರೆ ಸಪ್ತಾಹದ ಪಾರಾಯಣ’ ಪರಿಪೂರ್ಣವಾಗಿ ನಡೆಸಲಾಗುತ್ತದೆ ಅದರಂತೆ ಗುರುಚರಿತ್ರೆ ಸಪ್ತಾಹದ ಪಾರಾಯಣವನ್ನು ಮಳ್ಳೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಪೂರ್ಣಾನಂದಸ್ವಾಮೀಜಿ, ಬಾಗೇಪಲ್ಲಿ ಶೇಷಕುಮಾರ್ ಹಾಗೂ ಶ್ರೀ ದತ್ತಾತ್ರೇಯ ಸಮಾಜ ಸಾಧುಮಠ ಟ್ರಸ್ಟ್ ಅಧ್ಯಕ್ಷ ವಿ ಕೃಷ್ಣಮೂರ್ತಿ ಅವರು ನಡೆಸಿಕೊಡುವರು.
ನಂತರ ಕೊನೆಯ ದಿನ ಡಿ. 15ರಂದು ಶಶಿಕುಮಾರ್ ಅವರು ಬೆಳಗ್ಗೆ 10:30 ಗಂಟೆಯಿಂದ 11:30 ಗಂಟೆ ಒಳಗೆ ಗುರುಚರಿತ್ರೆ ಸಪ್ತಾಹದ ಪಾರಾಯಣ ಮುಕ್ತಾಯ ಮಾಡುವರು ಇದೇ ದಿನ ಮಧ್ಯಾಹ್ನ 1 ಗಂಟೆಗೆ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಸಪ್ತಾಹದ ಏಳು ದಿನಗಳ ಕಾಲ ನಡೆಯುವ ಆಧ್ಯಾತ್ಮಿಕ ಪ್ರವಚನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕಲ ಭಕ್ತಾದಿಗಳು ಸಾಧುಮಠದಲ್ಲಿ ಆಯೋಜಿಸಿರುವ ಜಯಂತಿಯ ಸಪ್ತಾಹಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೃಷ್ಣಮೂರ್ತಿ ವಿನಂತಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಶ್ರೀ ದತ್ತಾತ್ರೇಯ ಸಮಾಜ ಸಾಧು ಮಠ ಟ್ರಸ್ಟ್ ನ ಕಾರ್ಯದರ್ಶಿ ಪಿ.ವಿ.ರಾಮಚಂದ್ರರೆಡ್ಡಿ, ಜಂಟಿ ಕಾರ್ಯದರ್ಶಿ ಆರ್.
ಓ.ಪ್ರಭಾಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ರಂಗಪ್ಪ, ಕೆ.ಎನ್.ಹರಿಕುಮಾರ್, ವಿ ಸುಬ್ರಹ್ಮಣ್ಯ ಚಾರಿ, ಜಿ.ಎಸ್ ಶ್ರೀನಾಥ್, ಪ್ರೆಸ್ ಎಂ.ಕೃಷ್ಣಪ್ಪ, ಡಿ.ಎಸ್. ಆನಂದರೆಡ್ಡಿ ಬಾಬು, ಉಪಸ್ಥಿತರಿದ್ದರು.