ಪೀಣ್ಯ ದಾಸರಹಳ್ಳಿ: ಸಂಜೀವಿನಿ ಫೌಂಡೇಶನ್ ವತಿಯಿಂದ ಡೆಂಗ್ಯೂ ಮಹಾಮಾರಿ ವಿರುದ್ಧ ಜಾಗೃತಿ ಅಭಿಯಾನ ಹಾಗೂ ಉಚಿತ ಸುರಕ್ಷಿತ ಸೊಳ್ಳೆ ಪದರ ಕಿಟ್ ವಿತರಣೆಯನ್ನು ಅಧ್ಯಕ್ಷರಾದ ಪುಷ್ಪಲತಾ, ಸುಧಾ, ಶುಭ ವೆಂಕಟೇಶ್, ಶ್ವೇತಾ, ರವೀಶ್, ನಾರಾಯಣ ಬೈಲಪ್ಪ, ಸುದೀಸ್, ವಸಂತ, ಉಮಾ ಇವರುಗಳ ನೇತೃತ್ವದಲ್ಲಿ ನಾಗರ ಭಾವಿಯ ವಿನಾಯಕ ನಗರದ ಕಾರ್ಮಿಕರಿಗೆ ಸೊಳ್ಳೆ ಪರದೆ ಕಿಟ್ ವಿತರಣೆ ಮಾಡಲಾಯಿತು.
ಮೂರು ವರ್ಷಗಳಿಂದ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ನೆರವಾಗುವ ರೀತಿ ಒಂದಲ್ಲ ಒಂದು ರೀತಿ ಕಾರ್ಯಕ್ರಮವನ್ನು ರೂಪಿಸಿ ಮಹಿಳಾ ಉತ್ತೇಜನ ಕಾರ್ಯಕ್ರಮಗಳು, ಶಾಲಾ ಮಕ್ಕಳಿಗೆ ಮನರಂಜನೆ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಕಿಟ್ಟು ವಿತರಣೆ, ಮಹಿಳಾ ಸ್ವಾವಲಂಬಿಗಳಿಗೆ ಉತ್ತೇಜನ ನೀಡುವುದು. ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ,
ಅಂಗವಿಕಲ ಉತ್ತೇಜನ ಕಾರ್ಯಕ್ರಮಗಳು, ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಂಗವಿಕಲರಿಗೆ ಗುರುತಿಸಿ ಸನ್ಮಾನಿಸಿ ಅಭಿನಂದಿಸುವುದು ಹಾಗೂ ಅಂಗವಿಕಲರಿಗೆ ಅವಶ್ಯಕತೆ ಇರುವ ಸಲಕರಣೆಗಳ ವಿತರಣೆ ಮಾಡುವ ಕಾರ್ಯಕ್ರಮ ಹಾಗೂ ಮುಂತಾದ ಕಾರ್ಮಿಕರಿಗೆ ಅವಶ್ಯಕತೆ ಇರುವ ಸಲಕರಣೆಗಳು ನೀಡುತ್ತಾ ಬಂದಿರುವ ಶ್ರೀ ಸಂಜೀವಿನಿ ಫೌಂಡೇಶನ್ ಹಾಗೂ ಪದಾಧಿಕಾರಿಗಳು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.