ಮಾಲೂರು: ಪಟಾಲಮ್ಮ ಬಡಾವಣೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿಜಿ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ರಾಜಣ್ಣ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಶಿವಲಿಂಗಪ್ಪ ಘೋಷಿಸಿದ್ದಾರೆ.
ಪಟ್ಟಣದ ಗಾಂಧಿ ವೃತದಲ್ಲಿ ಇರುವ ಪಟಾಲಮ್ಮ ಬಡಾವಣೆಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಕಾಲದ ಅವಧಿಗೆ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ರಾಜಣ್ಣನವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣೆಯ ಕಾಯ್ದೆ ಪ್ರಕಾರ ಅಧ್ಯಕ್ಷರಾಗಿ ವಿಜಯಕುಮಾರ್ ಹಾಗೂ ಉಧ್ಯಕ್ಷರಾಗಿ ರಾಜಣ್ಣ ಮುಂದಿನ 5 ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ. ಹಾಲು ಉತ್ಪಾದಕ ರೈತರಿಗೆ ಸರ್ಕಾರ ಮತ್ತು ಒಕ್ಕೂಟದಿಂದ ಬರುವ ಸೌಲಭ್ಯಗಳು ಮತ್ತು ಯೋಜನೆಗಳನ್ನು ತಲ್ಪಿಸುವ ಮೂಲಕ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುದಾಗಿ ಹಾಗೂ ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.ನಿರ್ದೇಶಕರಾದ ಎನ್ ಮಂಜುನಾಥ್, ವೆಂಕೋಬ ರಾವ್, ವಿ ವೆಂಕಟೇಶ್, ಕೃಷ್ಣಪ್ಪ ಎಂಪಿ, ಕೆ ಮಂಜುನಾಥ್, ಎಸ್ ರಮೇಶ್, ಗಂಗಮ್ಮ, ಮಾಲತಿ, ಕಾರ್ಯದರ್ಶಿ ಮಂಜುನಾಥ್, ಹಾಲು ಪರೀಕ್ಷೆಕರು ಮುನಿರಾಜು ಇನ್ನಿತರರು ಇದ್ದಾರೆ.