ಬಂಗಾರಪೇಟೆ: ಹಾಲು ಉತ್ಪಾದಕ ಸಹಕಾರಿ ಸಂಘ ನಿಯಮಿತ ಕಾರಮಂಗಳ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
ಸಂದರ್ಭದಲ್ಲಿ ಕೆಸಿ ಮುನಿರಾಜು ಮಾತನಾಡಿದ್ದು 202324ನೇ ಸಾರ್ ಇಲ್ಲ ಆಡಳಿತ ಮಂಡಳಿ ವಾರ್ಷಿಕ ವರದಿಯನ್ನು ಪರಿಶೀಲಿಸಿ ಅನುಮೋದಿಸುವುದರ ಬಗ್ಗೆ ವಿಚಾರ ನಡೆಸಿದರು ಸಂಘದ ಕಾರ್ಯ ಚಟುವಟಿಕೆ ಅನುಮೋದನೆಯನ್ನು ವಿಚಾರ ಪ್ರಸ್ತಾವ ಮಾಡಿದರು.
ಹಾಲು ಉತ್ಪಾದಿಸುವವರ ಬಗ್ಗೆ ಹೆಚ್ಚುವರಿ ಇಳುವರಿ ತರುವುದರ ಬಗ್ಗೆ ಮಾಹಿತಿ ನೀಡಿದರು ಹಾಲು ಉತ್ಪಾದಕರ ಕೆಎಂಎಫ್ ಕಡೆಯಿಂದ ರೈತರಿಗೆ ಬೇಕಾದಂತಹ ಹೈನುಗಾರಿಕೆಗೆ ಬೇಕಾದಂತ ಸಕಲ ಸೌಲಭ್ಯಗಳು ವಿಮೆ ಹಾಗೂ ವೈದ್ಯಕೀಯ ಪ್ರಕ್ರಿಯೆಗಳು ತಮ್ಮ ರೀತಿಯ ಪೌಷ್ಟಿಕ ಆಹಾರಗಳು ನೀಡುವುದರ ಬಗ್ಗೆ ತಾಲೂಕಿನ ವ್ಯವಸ್ಥಾಪಕರಾದ ಶಂಕರ್ ರೆಡ್ಡಿರವರು ಕವಿಸ್ತಾರವಾಗಿ ತಿಳಿಸಿಕೊಡುತ್ತಾರೆ ತಿಳಿಸಿದರು.
ವ್ಯವಸ್ಥಾಪಕರು ಶಂಕರ್ ರೆಡ್ಡಿ ರವರು ಮಾತನಾಡಿ ಕೋಲಾರ ಜಿಲ್ಲೆಯ ಹಾಲು ಉತ್ಪಾದನೆ ಮಾಡುವುದರಲ್ಲಿ ಬಂಗಾರಪೇಟೆ ಹಾಗೂ ಕೆಜಿಎಫ್ 2ನೇ ಸ್ಥಾನ ಪಡೆದುಕೊಂಡಿದೆ ನೀವು ಸಹ ಎಲ್ಲರೂ ಮಗೆ ಪ್ರೋತ್ಸಾಹಿಸುವಂತೆ ವರ್ಷದಲ್ಲಿ ಹಲವಾರು ಋತುಗಳಲ್ಲಿ ಹಾಲಿನ ದರ ಹೆಚ್ಚಳ ಹಾಗೂ ಹೇಳಿಕೆ ಕಂಡು ಬರುತ್ತದೆ ಅದನ್ನು ಸರಿದೂಗಿಸಿಕೊಂಡು ಕೆಎಂಎಫ್ ಡೈರಿಯ ಸದಾ ಹೈನುಗಾರಿಕೆಗೆ ಬೆನ್ನೆಲುಬಾಗಿ ನಿಂತಿರುತ್ತದೆ ಈಗಾಗಲೇ ಹಸುಗಳಿಗೆ ವಿಮೆ ಮಾಡಿಸಿಕೊಡಲಾಗುತ್ತಿದೆ ಹಸುಗಳ ಆರೋಗ್ಯ ವಿಚಾರಣೆಗಾಗಿ ವೈದ್ಯರನ್ನ ನೇಮಕ ಮಾಡಿದ್ದೀರಿ ಕೋಲಾರ ಜಿಲ್ಲೆಯ ಸೋಲಾರ್ ಪ್ಲಾಂಟ್ ಅನ್ನು ಸಹ ನೆರವೇರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕಾರಣಿ ಮಂಡಳಿ ಸದಸ್ಯರು ಉಪಾಧ್ಯಕ್ಷರು ಮಂಜುಳಮ್ಮ, ನಿರ್ದೇಶಕರಗಳು, ಭತಪ್ಪ, ಸತ್ಯನಾರಾಯಣ ರಾವ್, ಭೈರಪ್ಪ, ನಾರಾಯಣಸ್ವಾಮಿ,ಬೈರೇಗೌಡ,ಮುನಿರಾಜು, ಮಂಜುನಾಥ್, ಮುನೇಶಪ್ಪ,ಆನಂದ್, ಸರೋಜಮ್ಮ, ಸಾವಿತ್ರಮ್ಮ, ಸೇರಿದಂತೆ ಇನ್ನೂ ಹಲವರು ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.