ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಹೋದ ಪರಿಣಾಮ ಇದೀಗ ರಾಜ್ಯಸರ್ಕಾರದ ವತಿಯಿಂದ ರಾಜ್ಯದ ಎಲ್ಲಾ ಜಲಾಶಯಗಳ ಗುಣಮಟ್ಟದ ಬಗ್ಗೆ ವಾಸ್ತವ ಸ್ಥಿತಿ ಅರಿಯಲು ತಜ್ಞರ ಸಮಿತಿ ರಚಿಸಲು ಸಿದ್ಧತೆ ನಡೆದಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವಿಷಯವನ್ನು ತಿಳಿಸಿದ್ದು, ತುಂಗಾಭದ್ರಾ ಡ್ಯಾಮ್ನ ದುರಸ್ಥಿ ಶೀಘ್ರದಲ್ಲಿಯೇ ನಡೆಯಲಿದ್ದು, ರೈತರ ಬೆಳೆ ಕಾಪಾಡಲು ಮುಂದಾಗಿದ್ದೇವೆ ಎಂದಿದ್ದಾರೆ.ಜಲಾಶಯದ ಗೇಟ್ ಕೊಚ್ಚಿಹೋದ ಪರಿಣಾಮ ಅಪಾಯದ ಸ್ಥಿತಿ ಅಂತು ಎದುರಾಗಿತ್ತು.
ಇದೀಗ ತಜ್ಞರ ಕಾರ್ಯವೈಖರಿಯಿಂದಾಗಿ ನಾಲ್ಕೈದು ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ಡ್ಯಾಮ್ನಲ್ಲಿ 55ರಿಂದ 60 ಟಿಎಂಸಿ ನೀರು ಉಳಿಸಲು ಪ್ರಯತ್ನ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಜಲಾಶಯಗಳ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.