ಬೆಂಗಳೂರು: ಮಗ ಕುಡಿದು ಬಂದು ಗಲಾಟೆ ಮಾಡುವುದನ್ನು ಸಹಿಸಿಕೊಳ್ಳಲಾಗದೆ ತಂದೆಯೇ ಮಗನನ್ನು ಮರದ ಹಲಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿ ಬಳಿ ಇರುವ ಚಿತ್ರಕೂಟ ಶಾಲೆ ಬಳಿ ನಡೆದಿದೆ.
ನಿನ್ನೆ ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ಮದ್ಯಪಾನ ಮಾಡಿ ರಾಜೇಶ್ ಎಂಬುವವನು ಮನೆಗೆ ಬಂದು ಕಿಟಕಿ ಗ್ಲಾಸ್ ಗಳನ್ನು ಹೊಡೆದು ಗಲಾಟೆ ಮಾಡುತ್ತಿದ್ದಿದ್ದನ್ನು ಗಮನಿಸಿದ ತಂದೆ ಲಿಂಗಪ್ಪ ಕೋಪಗೊಂಡು ಮರದ ಹಲಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುತ್ತಾರೆ ಎಂದು ಲೋಕೇಶ್ ಎಂಬುವರು ದೂರು ನೀಡಿರುತ್ತಾರೆ.ಕೆಂಗೇರಿ ಪೊಲೀಸರು ಕೊಲೆ ಮೊಕದ್ದಮೆ ದಾಖಲು ಮಾಡಿಕೊಂಡು ಲಿಂಗಪ್ಪನನ್ನು ಬಂಧಿಸಿ ಕ್ರಮ ಕೈಗೊಂಡಿರುತ್ತಾರೆ.