ಭಾರತದ ಪ್ರೀಮಿಯಮ್ ಹಾಗೂ ಮುಂಚೂಣಿ ಅನುಭವೀ ಪ್ಲೈವುಡ್ ಉತ್ಪಾದನಾ ಸಂಸ್ಥೆಗಳ ಪೈಕಿ ಒಂದಾದ ಡ್ಯೂರೋಪ್ಲೈ ತನ್ನ ಮರದ ಉತ್ಪನ್ನ ಶ್ರೇಣಿಯಾದ್ಯಂತ(ಪ್ಲೈವುಡ್, ವೆನೀರ್ ಗಳು, ಬಾಗಿಲುಗಳು ಹಾಗೂ ಬ್ಲಾಕ್ಬೋರ್ಡ್ಗಳು) ಇರುವೆ ಮತ್ತು ಕೊರೆಯುವ ಹುಳು ಬಾಧೆಯ ವಿರುದ್ಧ ಜೀವಿತಾವಧಿ ಖಾತರಿ ಒದಗಿಸಿದೆ.
ಡ್ಯೂರೋಪ್ಲೈ, ಈ ಉದ್ದಿಮೆಯಲ್ಲಿ ಇಂತಹ ವಿಶಿಷ್ಟ ಮೌಲ್ಯ ಕೊಡುಗೆಯನ್ನು 2016ರಷ್ಟು ಹಿಂದೆಯೇ ಪರಿಚಯಿಸಿದ್ದ ಪ್ರಪ್ರಥಮ ಸಂಸ್ಥೆಯಾಗಿತ್ತು. ಇಂತಹ ಗ್ರಾಹಕ-ಕೇಂದ್ರಿತ ಉತ್ಪನ್ನ ಆವಿಷ್ಕಾರಕ್ಕೆ ಅತ್ಯಂತವಾಗಿ ಗೌರವಿಸಲ್ಪಟ್ಟಿರುವ ಡ್ಯೂರೋಪ್ಲೈ, ಪೀಳಿಗೆ ಪೀಳಿಗೆಗಳವರೆಗೂ ಬಾಳುವಂತಹಉತ್ಪನ್ನ ಉತ್ಪಾದಿಸುತ್ತದೆ.
ಈ ಖಾತರಿಯೊಂದಿಗೆ ಡ್ಯೂರೋ ಪ್ಲೈ, ಬಾಳಿಕೆ ಹಾಗೂ ನಂಬಿಕೆಯ ಅತ್ಯುನ್ನತ ಮಾದಂಡಗಳನ್ನು ಪೂರೈಸುವ ದೀರ್ಘಬಾಳಿಕೆಯ ಹಾಗೂ ಅತ್ಯುತ್ಕೃಷ್ಟ-ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಪುನರುಚ್ಚಿರಿಸುವುದರ ಜೊತೆಗೆ, ದೇಶಾದ್ಯಂತ ಮನೆ ಮಾಲೀಕರುಗಳು, ಆರ್ಕಿಟೆಕ್ಟ್ಗಳು ಹಾಗು ಒಳಾಂಗಣ ವಿನ್ಯಾಸಕರ ಸದಾ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುತ್ತಾ ಬರುತ್ತಿದೆ.
ಡ್ಯೂರೋಪ್ಲೈದ ಎಮ್ದಿ ಮತ್ತು ಸಿಇಒ ಅಖಿಲೇಶ್ ಚಿಟ್ಲಾಂಗಿಯ, “ಡ್ಯೂರೋಪ್ಲೈದಲ್ಲಿ, ಗುಣಮಟ್ಟದ ಪರಿಮಿತಿಗಳನ್ನು ಮೀರುವ ಸಲುವಾಗಿ ಯಾವಾಗಲೂ ಗ್ರಾಹಕ-ಕೇಂದ್ರಿತ ಆವಿಷ್ಕಾರದಲ್ಲಿ ನಂಬಿಕೆ ಇರಿಸಿದ್ದೇವೆ. ಇರುವೆ ಮತ್ತು ಕೊರೆಯುವಹುಳು ನಿರೋಧಕ ಪ್ಲೈವುಡ್ ಉತ್ಪನ್ನಗಳ ಜೀವಿತಾವಧಿ ಖಾತರಿ ಒದಗಿಸಿದ ಉದ್ದಿಮೆಯ ಪ್ರಪ್ರಥಮ ಸಂಸ್ಥೆಯಾಗಿ ನಾವು, ಕೇವಲ ಉದ್ದಿಮೆಯಲ್ಲಿ ಬಾಳಿಕೆಗಾಗಿ ಹೊಸ ಮಾನದಂಡ ಸ್ಥಾಪಿಸಿರುವುದು ಮಾತ್ರವಲ್ಲದೆ, ನಮ್ಮ ಗ್ರಾಹಕರಿಗೆ ನಮ್ಮ ಖಾತರಿಯನ್ನೂ ಭದ್ರಪಡಿಸಿದ್ದೇವೆ.
ಈ ಉಪಕ್ರಮವು ನಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸಿ, ನಮ್ಮ ಗ್ರಾಹಕರು ಅತ್ಯುತ್ಕೃಷ್ಠ ಕಾರ್ಯಕ್ಷಮತೆಯುಳ್ಳ, ದೀರ್ಘ ಮೌಲ್ಯದ ಹಾಗೂ ಸುದೀರ್ಘ ಸಂತೃಪ್ತಿಯ ಖಾತರಿಯನ್ನೂ ಪ್ರದರ್ಶಿಸುತ್ತದೆ. ಆರು ದಶಕಗಳ ಅಪಾರ ಅನುಭವದೊಂದಿಗೆ ಡ್ಯೂರೋಪ್ಲೈ ಗುಣವಿಶೇಷತೆ ಪರಿಚಯಿಸುವಲ್ಲಿ ಮಾರ್ಗಮುಂದಾಳು ಆಗಿದೆ ಎಂದರು.