ಭಾರತದ ವಿಶ್ವವಿದ್ಯಾಲಯಗಳ ಒಕ್ಕೂಟದ (ಎಐಯು)ವತಿಯಿಂದ ದಕ್ಷಿಣ ರಾಜ್ಯ ವಿವಿಗಳ ಮಹಿಳಾ ಕಬಡ್ಡಿ ಸ್ಪೋರ್ಟ್ಸ್ ನಡೆಯುತ್ತಿರುವುದು ತಮಿಳುನಾಡಿನ ಕಾರೈಕುಡಿಯ ಅಲಗಪ್ಪ ವಿಶ್ವವಿದ್ಯಾಲಯದಲ್ಲಿ ನವಂಬರ್ 28ರಿಂದ ಡಿಸೆಂಬರ್ 3ರವರೆಗೆ, ಕ್ರೀಡಾಕೂಟದ ಸಾರಥ್ಯವನ್ನು ವಹಿಸುತ್ತಿರುವುದು ಪ್ರತಿಷ್ಠಿತ ಅಲಗಪ್ಪ ವಿ ವಿ. ಉದ್ವಾಟದ ಸಮಾರಂಭವು 29- 11- 2024 ರಂದು ಶುಕ್ರವಾರ ನೆರವೇರಿತು.
ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳ ಕಬ್ಬಡಿ ಹೆಣ್ಣು ಮಕ್ಕಳು, ಕೇರಳ, ತಮಿಳುನಾಡು ಹಾಗೂ ಆಂಧ್ರ, ತೆಲಂಗಾಣದ ಪಿ ಜಿ ಹಾಗೂ ಯು ಜಿ ಯ, ವಿಶ್ವವಿದ್ಯಾಲಯ ಕಾಲೇಜುಗಳ ಹೆಣ್ಣು ಮಕ್ಕಳು ಭಾಗವಹಿಸಿದ ಸಂದರ್ಭದಲ್ಲಿ , ಅಲಗಪ್ಪ ವಿಶ್ವವಿದ್ಯಾಲಯದ ಕುಲಪತಿ ಡಾ. ಜಿ. ರವಿ, ಹಾಗೂ ತಮಿಳುನಾಡಿನ ಫಿಸಿಕಲ್ ಎಜುಕೇಶನ್ ಯುನಿವರ್ಸಿಟಿಯ ಕುಲಪತಿ ಡಾಕ್ಟರ್ ಆರ್ ತಿರುಮಲ ಸ್ವಾಮಿ, ಸಿಂಡಿಕೇಟ್ ಸದಸ್ಯರು ಸೇರಿದಂತೆ ಇತರ ಅಧಿಕಾರಿ ವರ್ಗದವರು ನೆರೆದಿದ್ದರು.
ಉದ್ಘಾಟನೆಗೂ ಮುನ್ನ ದಿನವಾದ 28ರ ಗುರುವಾರ: ಕಬಡ್ಡಿ ತೀರ್ಪುಗಾರರು ಹಾಗು ಅಧಿಕಾರಿಗಳ ಮೀಟಿಂಗನ್ನು ಏರ್ಪಡಿಸಲಾಗಿತ್ತು. ಅಲ್ಲಿಂದ ಅಧಿಕಾರಿಗಳು ವಿದ್ಯಾರ್ಥಿ ಆಟಗಾರರೊಂದಿಗೆ ಬಂದಿದ್ದ ಕೋಚ್ ಹಾಗೂ ಮ್ಯಾನೇಜರ್ಗಳ ಕುರಿತು ಮಾತನಾಡಿದ ಸಂದರ್ಭದಲ್ಲಿ ಅಲ್ಲಿನ ಎಲ್ಲಾ ಕಬಡ್ಡಿ ಅಫೀಸಿಯಲ್ಸ್ ಗಳು, ಕೇವಲ ತಮಿಳಿ ನಲ್ಲಿಯೇ ತಾವು ಏನು ಹೇಳಬೇಕಾಗಿದೆ ಎಲ್ಲವನ್ನೂ ಹೇಳಿ ಮುಗಿಸಿದರು.ಸುಮಾರು ಅಲ್ಲಿ ನೆರೆದಿದ್ದ 25 ರಿಂದ 30 ಆಫೀಸಿಯಲ್ಸ್ ಗಳು ತಾವು ಹೇಳಬೇಕಾಗಿದ್ದ ಎಲ್ಲ ನಿಬಂಧನೆಗಳನ್ನು ಒಂದು ಗಂಟೆಯ ಕಾಲ ಅವರ ಪ್ರಾದೇಶಿಕ ಭಾಷೆಯಾದ ತಮಿಳುನಲ್ಲಿಯೇ ಹೇಳಿ ಮುಗಿಸಿದರು.
ಕರ್ನಾಟಕದಿಂದ ಹೋಗಿದ್ದ ಮೈಸೂರು ಮಂಡ್ಯ ಗುಲಬರ್ಗಾ ದಾವಣಗೆರೆ ಬೆಂಗಳೂರು ಹೀಗೆ ಹಲವು ವಿಶ್ವವಿದ್ಯಾಲಯಗಳ ಕೋಚ್ಗಳು ನಾವು ಮಾತನಾಡಿಕೊಂಡೆವು. ಇದು ಹೆಸರಿಗೆ ಮಾತ್ರ ದಕ್ಷಿಣ ರಾಜ್ಯಗಳ ಕ್ರೀಡಾಕೂಟ ನಡೆಸುತ್ತಿರುವುದು. ಇಲ್ಲಿ ಕೇರಳ, ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಸುಮಾರು ಐದಕ್ಕಿಂತ ಹೆಚ್ಚು ರಾಜ್ಯಗಳು ಭಾಗವಹಿಸಿವೆ. ಆ ಎಲ್ಲ ರಾಜ್ಯಗಳ ಭಾಷೆಯು ಕೇವಲ ತಮಿಳು ಆಗಿದೆಯೇ…? ಇಲ್ಲ ಕನ್ನಡ, ತೆಲುಗು, ಕೆರಳಿಯನ್ ಹೀಗೆ ಹಲವು ಭಾಷೆಗಳನ್ನು ಮಾತನಾಡುವವರು ಅಲ್ಲಿ ನೆರೆದಿದ್ದು ಅವರೆಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಮಾತನಾಡಬೇಕಿತ್ತು. ಆದರೆ ಅವರು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಕೇವಲ ತಮಿಳಿನಲ್ಲಿ ಮಾತ್ರ. ಈ ವಿಚಾರ ನಮ್ಮೆಲ್ಲರಿಗೂ ಬೇಸರ ತರುವಂತಿತ್ತು. ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ.
ಮುಂದಿನ ದಿನವಾದ ಶುಕ್ರವಾರವೂ ಕೂಡ ತಮಿಳಿನಲ್ಲೇ ದರ್ಬಾರ್: ಉದ್ಘಾಟನಾ ದಿನದಲ್ಲಿ ನಿಯಮದ ಪ್ರಕಾರ ರಾಷ್ಟ್ರಧ್ವಜ, ಪ್ರಾದೇಶಿಕ ರಾಜ್ಯದ ಧ್ವಜ, ಭಾರತದ ವಿಶ್ವವಿದ್ಯಾಲಯಗಳ ( ಎಐಯು ) ಧ್ವಜಗಳನ್ನು ಹಾರಿಸಬೇಕು. ಅದು ಯಥಾಪ್ರಕಾರವಾಗಿ ಹಾರಿಸಲಾಯಿತು. ಆದರೆ ದುರದೃಷ್ಟವಶಾತ್ ಪ್ರಾರಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕಿತ್ತು, ಆದರೆ ತಮಿಳು ಭಾಷಾಭಿಮಾನದ ಯಥೇಚ್ಛ ಅಭಿಮಾನದಿಂದ, ಕೇವಲ ತಮಿಳು ನಾಡಗೀತೆಯನ್ನು ಮಾತ್ರವೇ ಹಾಡಲಾಯಿತು. ಭಾರತದ ರಾಷ್ಟ್ರಗೀತೆಗೆ ಯಾವುದೇ ಮನ್ನಣೆ ಯನ್ನು ಅವರು ನೀಡಲಿಲ್ಲ. ಹಾಗಾಗಿ ಅವರು ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದೆನಿಸುತ್ತದೆ.
ಕರ್ನಾಟಕದ ನಾವುಗಳು ಮಾತನಾಡಿಕೊಂಡಿದ್ದು ಹೀಗೆ: ಭಾಷಾಭಿಮಾನ ಇರಬೇಕು ನಿಜ ಆದರೆ ರಾಷ್ಟ್ರಗೀತೆಯನ್ನು ಕಡೆಗಣಿಸು ವಷ್ಟರ ಮಟ್ಟಿಗೆ, ಭಾಷಾಭಿಮಾನ ಇದ್ದರೆ ಹೇಗೆ ಎಂದು…! ನಮ್ಮಲ್ಲಿ ಕೆಲವರು ಹೀಗೆಂದರು. ನಮ್ಮ ಕರ್ನಾಟಕದಲ್ಲಾಗಿದ್ದಿದ್ದರೆ ನಾಡಗೀತೆಯನ್ನು ಗೌರವಿಸುವುದರ ಜೊತೆಗೆ ರಾಷ್ಟ್ರಗೀತೆಯನ್ನು ಹಾಡಿ ಗೌರವಿಸುತ್ತಿದ್ದೆವು. ಆದರೆ ಇಲ್ಲಿ ಬೇರೆಯದ್ದೇ ವಾತಾವರಣ ಇದೆ, ತಮಿಳರಿಗೆ ಅವರ ಭಾಷೆ ಬಿಟ್ಟು, ಉಳಿದೆಲ್ಲ ಭಾಷೆಗಳೂ ನಗಣ್ಯ, ಅಷ್ಟೇ ಅಲ್ಲದೆ ಅವರ ನಾಡಗೀತೆಯನ್ನು ಬಿಟ್ಟು, ರಾಷ್ಟ್ರಗೀತೆಯೂ ಕೂಡ ನಗಣ್ಯ ಎಂಬುದು ಅಲ್ಲಿ ಪ್ರಮುಖ ವಿಷಯವಾಗಿತ್ತು.
ಗಮನಿಸಬೇಕಾದ ಅಂಶ: ನಮ್ಮ ಕನ್ನಡಿಗರು ವಿಶಾಲ ಹೃದಯದವರು, ಎಲ್ಲಾ ರಾಜ್ಯದವರನ್ನು ಗೌರವಿಸುತ್ತೇವೆ, ಹಾಗೆಯೇ ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇವೆ, ಯಾರೇ ಕರ್ನಾಟಕಕ್ಕೆ ಕಾಲಿಟ್ಟರು ಕೂಡ, ಅವರ ರಾಜ್ಯ ಹಾಗೂ ಭಾಷೆ ಯಾವುದೆಂದು ನಮಗೆ ಗೊತ್ತಾದ ತಕ್ಷಣವೇ, ಅವರ ಭಾಷೆಯಲ್ಲೇ ನಾವು ಅವರನ್ನು ಮಾತನಾಡಿಸುತ್ತೇವೆ.
ಉತ್ತರ ರಾಜ್ಯದ ಹಿಂದಿಯವರು ಎಂದು ಗೊತ್ತಾದ ತಕ್ಷಣವೇ ಅವರನ್ನು” ಬೈ” ಎಂದು ಸಂಬೋಧಿಸಿ ಗೌರವಿಸುವ ಮಂದಿಯೇ ಸಾಕಷ್ಟು ಜನ ಅವರೇ ಕನ್ನಡಿಗರು.ಕನ್ನಡಿಗರ ವಿಶಾಲತೆಯನ್ನು ಎನ್ಕ್ಯಾಶ್ ಮಾಡಿಕೊಳ್ಳುತ್ತಿರುವ ಅನ್ಯರು: ತಮಿಳುನಾಡಿನ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ನೇಪಾಳಿಗಳು ಹಾಗೂ ಹಿಂದಿಯವರು ಕೂಡ ಕೆಲಸ ಮಾಡುತ್ತಾರೆ, ಆದರೆ ಅವರು ತಮಿಳನ್ನು ಕಟ್ಟುನಿಟ್ಟಾಗಿ ಮಾತನಾಡುತ್ತಾರೆ.
ಎಂಬುದು ಗಮನಾರ್ಹ ಸಂಗತಿಯಾಗಿದ್ದು, ಆದರೆ ನಮ್ಮ ಕರ್ನಾಟಕದಲ್ಲಿ ನಮ್ಮ ವಿಶಾಲ ಮನೋಭಾವನೆಯನ್ನು ಬಳಸಿಕೊಳ್ಳುವ ಅನ್ಯ ರಾಜ್ಯದವರು ಅವರದೇ ಭಾಷೆಯಲ್ಲಿ ಮಾತನಾಡುತ್ತಾ ಅವರದೇ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿಕೊಂಡು ಇಂದು ಬೆಂಗಳೂರಿನ ಸರಿ ಸುಮಾರು ಶೇಕಡ 60ಕ್ಕೂ ಹೆಚ್ಚು ಜನರು ಬೇರೆ ರಾಜ್ಯದಿಂದ ಬಂದವರೇ ಆಗಿದ್ದು, ವ್ಯಾಪಾರವಹಿವಾಟನ್ನು ನಡೆಸಿ, ಕರ್ನಾಟಕದಿಂದ ಶ್ರೀಮಂತರಾಗುತ್ತಿದ್ದು, ಅವರ ಭಾಷೆಗಳನ್ನೇ ನಮ್ಮವರ ಮೇಲೆ ಹೇರಿ, ಕನ್ನಡವನ್ನು ಕಡೆಗಣಿಸುತ್ತಿರುವ ಸಂದರ್ಭಗಳು ಹೆಚ್ಚುತ್ತಿದ್ದು, ಇದೊಂದು ಕನ್ನಡಿಗರಿಗೆ ಹಾಗೂ ಕರ್ನಾಟಕಕ್ಕೆ ಆಗುತ್ತಿರುವ ದುರಂತವೇ ಸರಿ., ಎನ್ನಬಹುದಾಗಿದ್ದು, ಕನ್ನಡಿಗರ ಹೃದಯ ವೈಶಾಲ್ಯತೆಯು ಕೂಡ ಇಲ್ಲಿ ದುರುಪಯೋಗವಾಗುತ್ತಿರುವುದು, ನೈಜತೆಗೆ ಹಿಡಿದ ಕನ್ನಡಿಯಂತಿದೆ.
ಬಲ್ಲ ಮೂಲಗಳ ಪ್ರಕಾರ: ಸುಮಾರು 60 ವರ್ಷಗಳ ಹಿಂದೆ ಹಿಂದಿ ವಿರೋಧಿ ಅಭಿಯಾನ ಶುರುವಾಗಿದ್ದು, ತಮಿಳುನಾಡಿನಲ್ಲೇ ಎಂಬ ಮಾಹಿತಿ ಇದ್ದು, ತದನಂತರ ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಪರಿಗಣಿಸಬಾರದು ಎಂಬ ಹೋರಾಟ ಬೇರೆ ರಾಜ್ಯಗಳಿಗೂ ಪಸರಿಸ ತೊಡಗಿತು ಎಂಬುದು ಗಮನಾರ್ಹ ವಿಚಾರ.
ಈಗ ಬಹು ಮುಖ್ಯ ಚರ್ಚೆಯ ಅಂಶ: ಎಲ್ಲರೂ ಅವರವರ ಭಾಷೆಯೇ ದೊಡ್ಡದು ಎಂಬ ಅಭಿಮಾನವೇನೋ ಸರಿ, ಆದರೆ ಉದ್ಯೋಗಕ್ಕಾಗಿ ಎಲ್ಲಾ ರಾಜ್ಯಗಳ ಜನರನ್ನು ಸಮೂಹಿಸಲು ಒಂದು ಮಾಧ್ಯಮ ಬೇಕಲ್ಲ.. ಅದು ಇಂಗ್ಲೀಷ್ ಆಗಿರಲಿ ಎಂದುಕೊಳ್ಳೋಣ…, ಇಂಗ್ಲೀಷ್ ಈಗ ಅಂತರರಾಷ್ಟ್ರೀಯ ಭಾಷೆಯಾಗಿರುವುದರಿಂದ ಇದಕ್ಕೆ ಜಾಗತಿಕ ಮನ್ನಣೆ ಇದೆ. ಇಂಗ್ಲಿಷ್ ಗೊತ್ತಿದ್ದರೆ ಜಗತ್ತಿನ ಎಲ್ಲಾದರೂ ಜೀವಿಸಬಹುದು. ಜಗತ್ತಿನ ಎಲ್ಲಾ ಕಡೆಗಳಲ್ಲೂ ಸುತ್ತಾಡಿ ಬರಬಹುದು. ಇದು ಒಳ್ಳೆಯ ವಿಚಾರವೇ…, ಇದರ ಬಗ್ಗೆ ನಮ್ಮ ಚಕಾರವಿಲ್ಲ.
ಎಲ್ಲರೂ ಭಾಷೆಯ ವಿಷಯದಲ್ಲಿ ತುಂಬಾ ರಿಜಿಡ್ ಆಗಿಬಿಟ್ಟರೆ, ಈಗಾಗಲೇ ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಾಗಿದೆ. ಆದರೆ ಇದು ಭಾಷೆಗಳ ಆಧಾರದ ಮೇಲೆ ಪ್ರತ್ಯೇಕ ರಾಷ್ಟ್ರದ ಬೇಡಿಕೆಯು ಇನ್ನೂ ಬಹಳ ದೂರ ಇಲ್ಲ ಎಂದೆನಿಸುತ್ತದೆ. ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲು ಪ್ರಮುಖ ಕಾರಣವೇ ರಾಷ್ಟ್ರಗೀತೆಯನ್ನು ಹಾಡದೆ ಕಡೆಗಣಿಸುತ್ತಿರುವುದರ ಪರಿಣಾಮದ ಸೂಚನೆಯೇ ಪ್ರತ್ಯೇಕ ರಾಷ್ಟ್ರದ ಬೇಡಿಕೆಯಾಗಿಯೂ ಪರಿಣಮಿಸಬಹುದು, ಎಂದು ಸೂಚಕವಾಗಿ ಹೇಳಬಹುದಾಗಿದೆ.
ವಿಶೇಷ ಸಂಗತಿ:
ಕರ್ನಾಟಕ ಹಾಗೂ ಇತರ ಎಲ್ಲಾ ರಾಜ್ಯಗಳಿಗೂ ಹೋಲಿಸಿದರೆ, ತಮಿಳುನಾಡಿನಲ್ಲಿ ಸ್ಪೋರ್ಟ್ಸ್ ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ತಮಿಳುನಾಡಿನಲ್ಲಿ ವಿಶೇಷವಾಗಿ ಸ್ಪೋರ್ಟ್ಸ್ ಯುನಿವರ್ಸಿಟಿ ಎಂದೇ ಪ್ರಾರಂಭಿಸಲಾಗಿದ್ದು, ದೈಹಿಕ ಶಿಕ್ಷಣ ಹಾಗೂ ಸ್ಪೋರ್ಟ್ಸ್ ನ ಹಲವು ಪ್ರಮುಖರಲ್ಲಿ, ಐದಾರು ಜನರನ್ನು ಈಗಾಗಲೇ ತಮಿಳುನಾಡಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಾಗಿ ನೇಮಿಸಲಾಗಿದ್ದು, ಇತರ ಯಾವುದೇ ರಾಜ್ಯಗಳಲ್ಲಿ ಸ್ಪೋರ್ಟ್ಸ್ ಗೆ ಈ ರೀತಿಯ ಪ್ರೋತ್ಸಾಹ ದೊರಕಿಲ್ಲ. ಡಾಕ್ಟರ್ ಬಿ.ಎಂ ಪಾಟೀಲರು ದೈಹಿಕ ಶಿಕ್ಷಣದ ಪ್ರಮುಖರನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಕುಲಪತಿಗಳನ್ನಾಗಿ ರಾಜ್ಯ ನೇಮಿಸಿದೆ ಹೊರತು, ಹಿಂದೆ ಈ ರೀತಿಯ ಯಾವ ಉದಾಹರಣೆಗಳು ಕೂಡ ಕರ್ನಾಟಕದಲ್ಲಿ ಕಂಡುಬಂದಿರುವುದಿಲ್ಲ. ಹಾಗಾಗಿ ಸ್ಪೋರ್ಟ್ಸ್ ಅನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕಾಗಿರುವುದು ಅತ್ಯಂತ ಜರೂರು ಅಗತ್ಯಗಳಲ್ಲಿ ಒಂದಾಗಿದೆ.
ಲೇಖಕರು:- ಡಾ. ಸತ್ಯಮೂರ್ತಿ ಉಪನ್ಯಾಸಕರು ಹಾಗೂ ಚಿಂತಕರು