ಆನೇಕಲ್: ತಮಿಳುನಾಡಿನ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಾದ ಆರ್ಮಸ್ಟ್ರಾಂಗ್ ಅವರನ್ನು ಕೊಲೆ ಮಾಡಿರುವ ಕೊಲೆಗಾರರಿಗೆ ಈ ಕೂಡಲೇ ಮರಣದಂಡಣೆ ಶಿಕ್ಷೆಯನ್ನು ನೀಡಿ ಗಲ್ಲಿಗೇರಿಸಬೇಕು ಎಂದು ವಿಸಿಕೆ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಸಿ ಹಳ್ಳಿ ವೇಣು ರವರು ಆಗ್ರಹಿಸಿದರು.
ಅವರು ಸರ್ಜಾಪುರ ವೃತ್ತದಲ್ಲಿ ಆನೇಕಲ್ ತಾಲ್ಲೂಕು ವಿಸಿಕೆ ಪಕ್ಷದ ಘಟಕದ ವತಿಯಿಂದ ಇತ್ತಿಚ್ಚಿಗೆ ತಮಿಳುನಾಡಿನ ಚನೈ ನಗರದಲ್ಲಿ ಬಿಎಸ್ಪಿ ಪಕ್ಷದ ರಾಜ್ಯಧ್ಯಕ್ಷ ಆರ್ಮಸ್ಟ್ರಾಂಗ್ ರವರ ಕೊಲೆಯನ್ನು ಖಂಡಿಸಿ ಹಮ್ಮಿಕೊಂಡಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ತಮಿಳುನಾಡಿನಲ್ಲಿ ದಲಿತ ಸಮುದಾಯವು ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದು ಅಲ್ಲಿ ಅನ್ಯಾಯ ಬಳಗ ಸಮುದಾಯ ಮತ್ತು ಬಡ ಮಧ್ಯಮ ವರ್ಗದ ಜನರಿಗೆ ನ್ಯಾಯವನ್ನು ಒದಗಿಸಲು ಶ್ರಮಿಸಿದರು.
ಆದರೆ ಇದನ್ನು ಸಹಿಸದ ಕೆಲವು ಕಿರಿಗೇಡಿಗಳು ಅವರನ್ನು ಪೊಲೀಸ್ ಠಾಣೆಯ ಸಮೀಪದಲ್ಲೇ ಅವರನ್ನು ಕೊಲೆ ಮಾಡಿರುವುದು ಖಂಡನೀಯವಾಗಿದ್ದು ಈ ಕೂಡಲೇ ತಮಿಳುನಾಡಿನ ರಾಜ್ಯಪಾಲರು ಮಧ್ಯಸ್ಥಿಕೆಯನ್ನು ವಹಿಸಿ ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದರು.ವಿಸಿಕೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ವಿ.ಚಂದ್ರಶೇಖರ್ ಮಾತನಾಡಿ, ಈ ದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ದೇಶದಾದ್ಯಂತ ಸಾಹಿತಿಗಳು, ಚಿಂತಕರು, ಪ್ರಗತಿಪರ ಹೋರಾಟಗಾರರ ಮೇಲೆ ಹಲ್ಲೆಗಳು, ಕೊಲೆಗಳು ನಡೆಯುತ್ತಿದ್ದರೂ ರಾಜ್ಯ ಪೊಲೀಸ್ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆಗಳು ಮೌನವಹಿಸಿರುವುದು ಕೆಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಂತಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಪ್ರತಿಭಟನಾಕಾರರು ಸರ್ಜಾಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೊಲೆಗೈದ ಆರೋಪಿಗಳನ್ನು ಗಲ್ಲಿಗೇರಿಸ ಬೇಕೆಂದು ಆಗ್ರಹಿಸಿ ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆಯಲ್ಲಿ ವಿಸಿಕೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ವಿ.ಚಂದ್ರಶೇಖರ್, ವಿಸಿಕೆ ಪಕ್ಷದ ವರ್ತೂರು ಜೆ.ಕೃಷ್ಣಪ್ಪ. ವಿ.ರಾಜ್ ಕುಮಾರ್, ರಾಜಣ್ಣ, ಪ್ರಕಾಶ್, ಕೋಲಾರ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಆನೇಕಲ್ ತಾಲ್ಲೂಕು ಅಧ್ಯಕ್ಷ ಗೋಪಸಂದ್ರ ವೆಂಕಟೇಶ್, ಮುಖಂಡರಾದ ಸುರೇಶ್ ಪ್ರಬುದ್ದ, ಕಾಡ ಅಗ್ರಹಾರ ಮಂಜು, ಪ್ರಕಾಶ್, ಜಗದೀಶ್, ಮಟ್ನಹಳ್ಳಿ ಮಹೇಂದ್ರ, ಸತೀಶ್, ಮೇಡಹಳ್ಳಿ ರವಿ, ಮುತ್ತಾನಲ್ಲೂರು ಮುನಿರಾಜು ಈರಣ್ಯ ಕಶುಬು, ವಕೀಲರಾದ ಪುರುಷೋತ್ತಮ್, ತಿಂಡ್ಲು ಚೌಡಪ್ಪ, ನಾರಾಯಣಸ್ವಾಮಿ, ಗೋಪಿ ಹಾಗೂ ವಿಸಿಕೆ ಪಕ್ಷದ ಪದಾದಿಕಾರಿಗಳು ಆಟೋ ಚಾಲಕರು ಮತ್ತಿತ್ತರರು ಹಾಜರಿದ್ದರು.