ಬೆಂಗಳೂರು: ತರುಣಿ, ಫೀನಿಕ್ಸ್ ಮಾಲ್ ಆಫ್ ಏಷ್ಯಾ ಮತ್ತು ಶಿ ಫಾರ್ ಸೊಸೈಟಿ ಇಂದು ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ವಿಶಿಷ್ಟ ಬೈಕ್ ರ್ಯಾಲಿ- ಹರ್ ರೈಡ್ ಹರ್ ರೂಲ್ಸ್ ಆಯೋಜಿಸಿತ್ತು. ಈ ಸ್ಫೂರ್ತಿದಾಯಕ ಕಾರ್ಯಕ್ರಮವು ಸ್ಟೀರಿ ಯೋಟೈಪ್ ಗಳನ್ನು ಮುರಿಯುವುದು ಮತ್ತು ಸ್ತ್ರೀತನದ ಬಹುಮುಖಿ ಸ್ವರೂಪವನ್ನು ಸಂಭ್ರಮಿಸುವುದಾಗಿದೆ.
ಈ ವಿಶೇಷ ಕಾರ್ಯಕ್ರಮವನ್ನು ವೈವಿಧ್ಯಮಯ ಹಿನ್ನೆಲೆಯ ಮಹಿಳೆಯರಿಗಾಗಿ ಆಯೋಜಿಸಿದ್ದು ಶಕ್ತಿ, ಸ್ವಾತಂತ್ರ್ಯ ಮತ್ತು ಘನತೆಯನ್ನು ಹೊಂದಿರುವ ಮಹಿಳಾ ಬೈಕರ್ ಗಳಿಗೆ ವಿಶೇಷ ಆದ್ಯತೆ ನೀಡುತ್ತದೆ.ಈ ಕಾರ್ಯಕ್ರಮವು ಮಹಿಳಾ ಬೈಕರ್ ಗಳಿಂದ ನಗರ ಪೂರ್ತಿ ರೈಡ್ ಮೂಲಕ ಪ್ರಾರಂಭಿಸಿದ್ದು ಅದು ಘನತೆ ಮತ್ತು ಶಕ್ತಿಯನ್ನು ಬಿಂಬಿಸಿದ್ದೇ ಅಲ್ಲದೆ ನೈಜ ಸ್ತ್ರೀತನವು ಗಡಿಗಳಿಲ್ಲ ಎಂದು ನಿರೂಪಿಸುತ್ತದೆ. ಭಾಗವಹಿಸಿದವರು ಈ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದೊಂದಿಗೆ ಅವರ ಪ್ರತಿಭೆ, ಶಕ್ತಿ ಮತ್ತು ಸಮುದಾಯ ಸ್ಫೂರ್ತಿಯನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮವು ವಿವಿಧ ಕ್ಷೇತ್ರಗಳ ಗಣ್ಯರು ಹೇಗೆ ಯುವ ಮಹಿಳೆಯರು ಸಾಮಾಜಿಕ ಪ್ರಗತಿಯ ವೇಗವರ್ಧನೆ ಮಾಡಬಲ್ಲರು ಎಂಬ ವಿಚಾರದ ಚರ್ಚೆಯೊಂದಿಗೆ ಸಮಾರೋಪಗೊಂಡಿತು.ಭಾಗವಹಿಸಿದವರಿಗೆ ಹೇಗೆ ಮಹಿಳಾ ಧ್ವನಿಗಳು ಬದಲಾವಣೆಗಳನ್ನು ತರಬಲ್ಲವು, ಸಮುದಾಯದ ಏಳಿಗೆ ಸಾಧಿಸಬಲ್ಲವು ಮತ್ತು ಮಹಿಳಾ ಪ್ರೇರಿತ ಸಾಮಾಜಿಕ ಬದಲಾವಣೆಯಲ್ಲಿ ನಾಯಕತ್ವವನ್ನು ಮರು ವ್ಯಾಖ್ಯಾನಿಸಬಹುದು ಎನ್ನುವುದರ ಕುರಿತು ಒಳನೋಟಗಳನ್ನು ನೀಡಿತು.
ಹಣ್ತನ ಎಂದರೆ ಬಹಳ ಸಂಕುಚಿತ ವ್ಯಾಖ್ಯಾನಗಳನ್ನು ನೀಡುತ್ತಿರುವ ವಿಶ್ವದಲ್ಲಿ `ಹರ್ ರೈ’, ಹರ್ ರೂಲ್ಸ್’ ಮಹಿಳೆಯರು ಬರೀ ಮೋಟಾರ್ ಸೈಕಲ್ ಗಳು ಮಾತ್ರವಲ್ಲದೆ ಜೀವನದಲ್ಲಿ ತಮ್ಮದೇ ಆದ ದಾರಿಯನ್ನೂ ಮುನ್ನಡೆಸಬಲ್ಲರು ಎನ್ನುವುದರ ಕುರಿತು ಒಳನೋಟ ನೀಡುತ್ತದೆ. `ಹರ್ ರೈಡ್, ಹರ್ ರೂಲ್ಸ್’ ತಮ್ಮ ನಿಜವನ್ನು ನಿಷ್ಪಕ್ಷಪಾತವಾಗಿ ಜೀವಿಸುವ ಪ್ರತಿ ಮಹಿಳೆಗೂ ಗೌರವವಾಗಿದೆ ಎಂದು ತರುಣಿಯ ಮಾರ್ಕೆಟಿಂಗ್ ಮ್ಯಾನೇಜರ್ ಊರ್ವಶಿ ಕಿಂಗ್ರಾಣಿ ಹೇಳಿದರು.
`ಈ ಕಾರ್ಯಕ್ರಮದ ಮೂಲಕ ನಾವು ಸತತವಾಗಿ ನಿಯಮಗಳಿಗೆ ಸವಾಲೆಸೆಯುವ ಮಹಿಳೆಯರ ಶಕ್ತಿ, ಸೌಂದರ್ಯ ಮತ್ತು ಸದೃಢತೆಯನ್ನು ಸಂಭ್ರಮಿಸುತ್ತೇವೆ ಮತ್ತು ಇತರರಿಗೂ ಹಾಗಿರಲು ಸ್ಫೂರ್ತಿ ತುಬುತ್ತೇವೆ’ ಎಂದರು.ಈ ಕಾರ್ಯಕ್ರಮವು ತರುಣಿಯ ಕೇಂದ್ರ ತತ್ವಕ್ಕೆ ಪೂರಕವಾಗಿದೆ: ಅದು- ನಿಮ್ಮಲ್ಲಿನ ತರುಣಿಯನ್ನು ಬಡಿದೆಬ್ಬಿಸಿ. ಮಹಿಳಾ ಬೈಕರ್ ಗಳು, ಕಲಾವಿದರು, ಭಾಷಣಕಾರರು ಮತ್ತು ಬೆಂಬಲಿಗರನ್ನು ಒಟ್ಟಿಗೆ ತರುವ ಮೂಲಕ ಹರ್ ರೈಡ್, ಹರ್ ರೂಲ್ಸ್ ಸ್ತ್ರೀತನದ ಮಿತಿಯಿರದ ಸಾಮರ್ಥ್ಯವನ್ನು ಅಪ್ಪಿಕೊಳ್ಳಲು ಬೆಂಬಲದ ಸಮುದಾಯವನ್ನು ಬೆಳೆಸುತ್ತದೆ.