ನೆಲಮಂಗಲ: ಮದ್ಯದ ಅಮಲಿನಲ್ಲಿ ಯುವಕನೊಬ್ಬ ತಹಶೀಲ್ದಾರ್ ಕಾರಿಗೆ ಅಡ್ಡಬಂದು ಪುಂಡಾಟ ಮೆರೆದಿರುವಂತಹ ಘಟನೆ ನೆಲಮಂಗಲ ತಾಲ್ಲೂಕಿನ ಯಂಟಗನಹಳ್ಳಿ ದೇವಿಹಳ್ಳಿ ಟೋಲ್ ಬಳಿ ನಡೆದಿದೆ.
ಕುಣಿಗಲ್ ತಹಸೀಲ್ದಾರ್ ರಶ್ಮಿ ಯವರು ಕುಣಿಗಲ್ ನಿಂದ ಬೆಂಗಳೂರಿಗೆ ಹೋಗುವಾಗ ನೆಲಮಂಗಲದ ಯಂಟಗನಹಳ್ಳಿ ಸಮೀಪದ ದೇವಿಹಳ್ಳಿ ಟೋಲ್ ಬಳಿ ರವಿಗೌಡ ಮತ್ತು ಆತನ ಸ್ನೇಹಿತರು ಫಾರ್ಚುನರ್ ಕಾರಿನಲ್ಲಿ ಬಂದು ತಹಸೀಲ್ದಾರ್ ರಶ್ಮಿ ಯವರ ಕಾರಿಗೆ ಅಡ್ಡ ಹಾಕಿ ಪುಂಡಾಟ ಮಾಡಿದ್ದಾರೆ.
ಕುಡಿದ ಮತ್ತಿನಲ್ಲಿ ಆತನ ಪುಂಡಾಟ ನೋಡಿ ಬಹಳಷ್ಟು ಭಯ, ಆತಂಕ ಗೊಂಡ ತಹಸೀಲ್ದಾರ್ ರಶ್ಮಿ ಯವರು ತಕ್ಷಣ 112ಗೆ ಕರೆಮಾಡಿ ಪೊಲೀಸರಿಗೆ ಮಾಹಿತಿ ನೀಡಿ ಆತನ ಬಗ್ಗೆ ವಿಚಾರಣೆ ಮಾಡಿ ಕ್ರಮ ತೆಗೆದುಕೊಳ್ಳಲು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ರವಿಗೌಡನನ್ನು ವಶಕ್ಕೆ ಪಡೆದು ಡ್ರಿಂಕ್ ಅಂಡ್ ಡೈವ್ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಸರಕಾರಿ ಅಧಿಕಾರಿಗಳಿಗೆ ಈ ರೀತಿ ಸಮಸ್ಯೆ ಆದರೆ ಜನಸಾಮಾನ್ಯರ ಗತಿಯೇನು ಇಂತಹವರಿಗೆ ಪೊಲೀಸರು ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿತ್ತು.