ಬಂಗಾರಪೇಟೆ : ತಾಂತ್ರಿಕ ದೋಷ ಹಿನ್ನಲೆಯಲ್ಲಿ ಹೆಲಿಕಾಪ್ಟರೊಂದು ತುರ್ತು ಭೂಸ್ಪರ್ಶವಾಗಿರುವ ಘಟನೆ ಬಂಗಾರಪೇಟೆ ತಾಲೂಕಿನ ಕರಪನಹಳ್ಳಿಯಲ್ಲಿ ನಡೆದಿದೆ.
ಭಾರತೀಯ ವಾಯಸೇನೆಗೆ ಸೇರಿದ ಹೆಲಿಕಾಪ್ಟರ್ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ನಲ್ಲಿ ಓರ್ವ ಮಹಿಳಾ ಪೈಲಟ್ ಸೇರಿದಂತೆ ಇಬ್ಬರು ಸುರಕ್ಷಿತವಾಗಿದ್ದಾರೆ.
ಗ್ರಾಮದಲ್ಲಿ ಇರುವ ಕೆರೆ ಅಂಗಳದಲ್ಲಿ ಸುರಕ್ಷಿತವಾಗಿ ಇಳಿದ ಹೆಲಿಕಾಪ್ಟರ್. ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದ್ದರು. ಯಾವುದೇ ಆತಂಕವಿಲ್ಲ.ಈ ಸಂಬಂಧ ವಾಯು ಪಡೆಯ ಅಧಿಕಾರಿಗಳಿಗೆ ಮಾಹಿತಿ ದೊರೆತಿದೆ. ತರಬೇತಿ ನಿಮಿತ್ತ ಕೋಲಾರದ ಕೆಜಿಎಫ್ ಬಂಗಾರಪೇಟೆಯಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸುತಿತ್ತು ಎಂದು ತಿಳಿದುಬಂದಿದೆ.