ನೆಲಮಂಗಲ: ದಲಿತ ಚಳವಳಿಯ ಪ್ರೇರಕ ಶಕ್ತಿಯಾಗಿದ್ದ, ಬಡ ಮಕ್ಕಳಿಗೆ ಅನ್ನ ದಾಸೋಹ ಮತ್ತು ಶಿಕ್ಷಣ ನೀಡಿ ನಿಸ್ವಾರ್ಥ ಕಾಯಕಯೋಗಿಯಾಗಿದ ದಿ. ಮಾತಾಜಿ ತಿಮ್ಮಕ್ಕನವರ ಸ್ಮಾರಕವನ್ನು ಮಾತಾಜಿಯವರ ಐಕ್ಯ ಸ್ಥಳವಾದ ತಾಲ್ಲೂಕಿನ ಚಿಕ್ಕಮಾರನಹಳ್ಳಿ, ಪುಷ್ಪ ಪ್ರಜ್ಞಾಎಸ್ಟೇಟ್ ನಲ್ಲಿ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷಸಮಿತಿ ಸಂಸ್ಥಾಪಕರಾದ ದಾದಾ ಸಾಹೇಬ್ ಡಾ. ಎನ್.ಮೂರ್ತಿ ಮಾತನಾಡಿ ಮಾತಾಜಿಯವರು ಪ್ರಾಣಿ, ಪಕ್ಷಿ, ಮರಗಿಡಗಳಿಗೆ ನೀರೆರೆದು ಪೋಷಿಸಿವೃಕ್ಷ ಮಾತೆಯಾಗಿದ್ದರು. ಜನ, ಜಾನುವಾರುಗಳಹಲವು ರೋಗ ರುಜಿನಗಳ ನಿವಾರಣೆಗೆ ಭವವೈದ್ಯೆಯಾಗಿದ್ದವರು.ಅಲ್ಲದೆ ಮಾತಾಜಿಯವರು ಜಾನಪದ ಕಲೆಯ ಜೀವನಾಡಿಯಾಗಿ, ಸಾರ್ಥಕ ಬದುಕು ಸಾಧಿಸಿದ ಮಹಾ ಸಾಧಕರಾಗಿದ ನನ್ನ ತಾಯಿಯನ್ನು ಅವಿಸ್ಮರಣೀಯವಾಗಿರಿಸಲು ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದರು.
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ,ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಮೈತ್ರಿವನ ಹಾಗೂ ಸ್ಮಾರಕ ಉದ್ಘಾಟನೆ ಮಾಡಿದರು ಮತ್ತು ಅವರ ಜೀವನ ಮತ್ತು ಸಾಧನೆಯ ಪುಸ್ತಕ ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಮಹಾ ಹಿರಿಯ ಬಿಕ್ಕುಣಿಯವರಾದ ಬುದ್ಧಮ್ಮ ಭಂತೇಜಿರವರು ಮತ್ತು ಮಹಾಬಿಕ್ಕು ಗಳು, ನಾಗಸೇನೆ, ಬಿ. ಆರ್ ಭಾಸ್ಕರ್ ಪ್ರಸಾದ್, ಕನಕೆನಹಳ್ಳಿ ಕೃಷ್ಣಪ್ಪ, ಆSS ರಾಜ್ಯ ಅಧ್ಯಕ್ಷರಾದ ಮುನಿರಾಜು, ಭೀಮರಾಜು, ಸಾಮ್ರಾಟ್ ಅರುಣ್ ಕುಮಾರ್, ಮಲ್ಲೇಶ್, ಗಂಗಾಧರ್, ಸೇರಿದಂತೆ ರಾಜ್ಯಮಟ್ಟದ ವಿವಿಧ ರಾಜಕೀಯ ಪಕ್ಷಗಳ ಹಾಗೂ ರಾಜ್ಯಮಟ್ಟದ ಹಲವಾರು ಸಂಘಟನೆಗಳ ಮುಖಂಡರು ಮತ್ತು ಹೋರಾಟಗಾರರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದರು.