ಬೆಂಗಳೂರು: ಮಗನೋರ್ವ ತಾಯಿಯನ್ನೇ ಕೊಂದಿರುವ ಘಟನೆ ಶ್ರೀಕಂಠೇಶ್ವರ ಲೇಔಟ್ನಲ್ಲ ನಡೆದಿದೆ.
ಆಯೇಷಾ (೫೦) ಎಂಬಾಕೆಯೇ ಮಗನಿಂದ ಕೊಲೆಯಾದ ದುರ್ದೈವಿ ತಾಯಿಯಾಗಿದ್ದಾಳೆ. ಶುಫಿಯಾನ್ (೩೨) ಕೊಲೆ ಆರೋಪಿ ಮಗನಾಗಿದ್ದು, ಮನೆಯಲ್ಲಿದ್ದ ಚಾಕುವಿನಿಂದ ತಾಯಿ ಯನ್ನು ಇರಿದು ಹತ್ಯೆ ಮಾಡಿದ್ದಾನೆ.
ಮೃತ ಆಯೇಷಾ ಗಂಡ ಮೃತಪಟ್ಟಿದ್ದು ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದಳು. ಆರೋಪಿ ಶುಫಿಯಾನ್ ಕೆಲಸಕ್ಕೆ ಹೋಗದೆ ಸೈಕೋ ರೀತಿ ವರ್ತಿಸುತ್ತಿದ್ದ, ಕೆಲಸಕ್ಕೆ ಹೋಗು ಎಂದು ಮಗನಿಗೆ ಬುದ್ದಿವಾದ ಹೇಳ್ಳುತ್ತಿದ್ದಳು, ಇದೇ ವಿಷಯಕ್ಕೆ ಆಗಾಗ ಜಗಳವಾಗುತ್ತಿತ್ತು. ಜಗಳ ವಿಕೋಪಕ್ಕೆ ಹೋಗಿ ಮಗ ತಾಯಿಯನ್ನು ಕೊಲೆ ಮಾಡಿದ್ದಾನೆ.
ಸ್ಥಳೀಯರು ಶುಫಿಯಾನ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಮೃತದೇಹ ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬAಧ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.