ಬೆಂಗಳೂರು: ತಾಯಿಯೇ ಮೊದಲ ಗುರು, ನಂತರದ ಸ್ಥಾನ ಶಿಕ್ಷಕರದು ಎಂದು ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅಭಿಮತ ವ್ಯಕ್ತಪಡಿಸಿದರು.
ವಿವೇಕ ಚೇತನ ಚಾರಿಟಬಲ್ ಟ್ರಸ್ಟ್ ಮತ್ತು ರಾಜ್ಯ ಸಿರಿ ಕನ್ನಡ ನುಡಿ ಬಳಗದ ಸಂಯುಕ್ತಾಶ್ರಯದಲ್ಲಿ25ನೇ ರಾಜ್ಯಮಟ್ಟದ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ “ಗುರುಶ್ರೀ” ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಗುರಿಯ ಬಗ್ಗೆ ಹೇಳಿಕೊಡಬೇಕು. ಮಕ್ಕಳಲ್ಲಿ ಏಕಾಗ್ರತೆ ಮೂಡಿಸಬೇಕು, ನಗು ನಗುತ್ತ ಪಾಠ ಮಾಡಬೇಕು. ಮಕ್ಕಳಿಗೆ ಅಕ್ಷರ ಜ್ಞಾನ, ಅರಿವು ಚಿಂತನೆ ಸಾಮಾಜಿಕ ಮೌಲ್ಯಗಳನ್ನು ತಿಳಿಸುತ್ತ ಇಂದಿನ ಮಕ್ಕಳನ್ನು ಉತ್ತಮ ಸತ್ಪ್ರಜೆಗಳನ್ನಾಗಿ ರೂಪಿಸುತ್ತಿರುವ ಉತ್ತಮ ಶಿಕ್ಷಕರನ್ನು ಕಳೆದ 25 ವರ್ಷಗಳಿಂದ ನಿರಂತರವಾಗಿ ರಾಜ್ಯದ ವಿವಿಧ ಭಾಗಗಳಿಂದ ಉತ್ತಮ ಶಿಕ್ಷಕ ಶಿಕ್ಷಕಿಯರನ್ನು ಗುರುತಿಸಿ ಗೌರವಿಸುತ್ತಿರುವ ವಿವೇಕ ಚೇತನ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ರವಿದಾಸ್ ಬಿಂಡಿಗನವಿಲೆ ಮತ್ತು ಅವರ ತಂಡ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಅಭಿನಂದನಾರ್ಹ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ರಾಜ್ಯ ಸಿರಿ ಕನ್ನಡ ನುಡಿ ಬಳಗದ ವೆಂಕಟೇಶ ಲಕ್ಷಾಣಿ ಮಾತನಾಡಿ ಮಕ್ಕಳಲ್ಲಿ ಮೌಢ್ಯ ತುಂಬಬೇಡಿ, ವಿಚಾರವಂತಿಕೆ ತುಂಬಿ. ಸಮಾಜದ, ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರದ್ಧು ಎಂದು ತಿಳಿಸಿದರು.ರಾಜ್ಯದ ವಿವಿಧ ಶಾಲೆಗಳಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿದ ಕ್ರಿಯಾಶೀಲ ಶಿಕ್ಷಕರುಗಳಾದ ಲೂಸಿ ಕಾಶ್ಮೀರ ಸಾಲ್ಫಾನಾ, ಮಾಲಿನಿ ಎಸ್, ಫಾಜಿಯ ಸಮರೀನ್, ಸುಜಾತ ಎಸ್, ರೂಪ ಕಿರಣ್ ಕುಮಾರ್, ಬಿ ಎಸ್ ಗೀತಾ, ಸುನೀತಾ ಗೌಡರ್, ರತ್ನಮ್ಮ, ಶಾಂತಾ ಬಿ ಪಿ, ರಾಧಾ ಕೆ,
ಮಂಜಪ್ಪ ಆರ್,ರವಿ ವಿ, ಸುರೇಶ ಅಂಗಡಿ, ಕಾಳಿದಾಸ ಬಸವಂತ ಬಡಿಗೇರ, ಹನುಮಂತಪ್ಪ ಹೆಚ್, ಮಹದೇವಸ್ವಾಮಿ ಬಿ, ಸೋಮು ರಾಮಪ್ಪ ಮೆಟಗುಡ್ಡ, ಕುಸುಮ ಜಿ ಎಂ, ಸತ್ಯನಾರಾಯಣ ಜಿ ಹೆಗಡೆ, ಶ್ರೀನಿವಾಸ್ ಎಸ್, ಆನಂದ್ ಎಂ, ಅಕ್ಬರ್ ಎಂ ಕಲ್ಯಾಣಿ, ಸತ್ಯಭಾಮ ಎಚ್ ಆರ್, ಪುಷ್ಪಾವತಿ ಮಲ್ಲಿಕಾರ್ಜುನ, ನಾಗೇಶ್ ಡಿ ಅಗೇರಾ, ಬಸವರಾಜಪ್ಪ ಎಚ್ ಎಸ್, ಶೈಲಾ ಎಚ್ ಕೆ, ಧರ್ಮಾನಂದ ಭಟ್, ಶಿವರಾಜು ಎಚ್, ಮಧು ಎನ್ ಸಿ, ಶಿವಾನಂದ ಹಾದಿಮನಿ, ಹೊನ್ನಗಂಗಪ್ಪ ಆರ್ ಸಿ, ರೇಣುಕಮ್ಮ ಎಲ್ ಆರ್, ಸುಚಿತ್ರ ಕುಂಬಾರ್, ಜಗದೀಶ್ ನಾಯಕ ಯು ಜಿ ಶೆಟ್ಟಿ, ಮಲ್ಲಿಕಾರ್ಜುನ ಜಿ, ಶುಭ ಎಂ ಎನ್, ಗುರುಪ್ರಸಾದ್, ಡಿ ಆರ್ ನಾಗರಾಜ, ವೀರೇಶ್ ನಾಯ್ಡು ಟಿ, ಮಹಾಂತೇಶ ಹುನಗುಂದ, ಕೇಶವಮೂರ್ತಿ ಕೆ, ಆನಂದ್, ನಗೀನಾ ಜಾನ್ ಆರ್ ಎಂ, ಕಲಾವತಿ ಪಿ ಹದಿಮೂರ, ವೇದರಾಧ್ಯ, ಸತೀಶ್ ಎಚ್ ಎಸ್, ಸಿ ಡಿ ಪ್ರಮೀಳಾ, ಆರ್ ಮಹೇಶ್ ಬಾಬು, ಚೈತ್ರ ಸಂದೇಶ್ ಇವರುಗಳಿಗೆ 2024-25ರ ಸಾಲಿನ ಪ್ರತಿಷ್ಠಿತ “ಗುರುಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟ್ರಸ್ಟ್ ನ ಅಧ್ಯಕ್ಷ ರವಿದಾಸ್ ಬಿಂಡಿಗನವಿಲೆ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಅಜ್ಞಾನ ದೂರ ಮಾಡಿ ಜ್ಞಾನದ ಕಡೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಶಿಕ್ಷಕರ ಸೇವೆ ನಿರಂತರವಾದದ್ದು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಕರ್ತವ್ಯ ಪಾಲನೆ ಬಹುಮುಖ್ಯವಾಗಿರುತ್ತದೆ. ಕಲ್ಲನ್ನು ಶಿಲೆಯಾಗಿಸುವ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ ಇಂತಹ ಶಿಕ್ಷಕರಿಗೆ ಕಳೆದ 25 ವರ್ಷಗಳಿಂದ ನಿರಂತರವಾಗಿ ನಮ್ಮ ವಿವೇಕ ಚೇತನ ಚಾರಿಟಬಲ್ ಟ್ರಸ್ಟ್ ಮಾಡುತ್ತ ಬಂದಿದೆ.
ಸುದೀರ್ಘ 25 ವರ್ಷಗಳಿಂದ ಕಾರ್ಯಕ್ರಮಕ್ಕೆ ಸಹಾಯಸ್ತ ನೀಡಿದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಈರಪ್ಪ ಮಹಾಲಿಂಗಪುರ, ಭದ್ರಾನಾಯ್ಡು, ಯೋಗಾನಂದ , ಜಿ ಎನ್ ರಾಘವೇಂದ್ರ, ಭದ್ರಾನಾಯ್ಡು, ಬಿ ವಿ, ಟೋನಿ, ಎಸ್ ಮಂಜುನಾಥ್, ಆರ್ ರಮೇಶ್, ಶೇಖ್ ಮುಜಾಸಿಂ, ಅಂಬರೀಷ್,ಮಾರುತೇಶ, ರುಕ್ಮಿಣಿ ಪ್ರಸಾದ್, ದೀಪಾ ಶ್ರೀನಿಧಿ, ಸುಷ್ಮಾ ಎ ಮಧು, ವಿಶ್ವನಾಥ ಶೆಟ್ಟಿ, ಕೆ ಮಂಜುನಾಥ್, ರಿಲೀಪ್ ಕುಮಾರ್ ಸಮಾರಂಭದಲ್ಲಿ ಹಾಜರಿದ್ದರು.