ದೇವನಹಳ್ಳಿ : ಮಲ್ಲೇಪುರ ಗ್ರಾಮಸ್ಥರಿಂದ ಜಮೀನಿಗಾಗಿ ಹೋರಾಟ ಮಲ್ಲೇಪುರ ಗ್ರಾಮದ ಜಮೀನಿನ ಮೇಲೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರ ಹೆಸರಿಗೆ ಮಾಡಲು ಹೊರಟಿರುವ ಗ್ರಾಮಾಧಿಕಾರಿಗಳನ್ನು ವಜಾ ಮಾಡಲು ಆಗ್ರಹಿಸುತ್ತಿದ್ದೇವೆ ಎಂದು ಗ್ರಾಮದ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಎಂ.ಡಿ. ರಾಮಾಂಜಿನಪ್ಪ ತಿಳಿಸಿದರು.
ಬೆಂ.ಗ್ರಾ. ಜಿಲ್ಲೆ ಚನ್ನರಾಯಪಟ್ಟಣ ಹೋಬಳಿ ಮಲ್ಲೇಪುರ ಗ್ರಾಮಸ್ಥರು ನಡೆಸಿದ ಹೋರಾಟದ ನೇತೃತ್ವ ವಹಿಸಿ ಮಾತನಾಡಿ ಮಲ್ಲೇಪುರ ಗ್ರಾಮದ ಸರ್ವೆ ನಂಬರ್ 50 /ಪಿ1 , 16 ಎಕರೆ 34 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಲ್ಲಿನ ಮೂಲ ನಿವಾಸಿಗಳು ಬದುಕುಕಟ್ಟಿಕೊಂಡಿದ್ದ ಪ್ರದೇಶದಲ್ಲಿ 107 ಕುಟುಂಬದವರು 94ಸಿಸಿ, 60, 53 ಅರ್ಜಿಗಳನ್ನು ನೀಡಲಾಗಿದ್ದರು ಬಡಜನರಿಗೆ ಅವುಗಳ ಹಕ್ಕನ್ನು ನೀಡದೆ ಬಲಾಡ್ಯರ ಹೆಸರಿಗೆ ಮಾಡುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು, ದೇವನಹಳ್ಳಿ ತಾಲೂಕಿನಲ್ಲಿ ಜಮೀನಿನ ಬೆಲೆ ಹೆಚ್ಚಿದ್ದು, ಕೆಲವು ಭೂಗಳ್ಳರು ಅಧಿಕಾರಿಗಳೊಂದಿಗೆ ಶಾಮಿಲ್ ಆಗಿ ಕೆಲವು ವ್ಯಕ್ತಿಗಳ ಹೆಸರಿಗೆ ಮಾಡಿರುವುದು ಖಂಡನಾರ್ಹ ಕೂಡಲೆ ಅವರನ್ನು ವಜಾ ಮಾಡಬೇಕು ಜಿಲ್ಲಾಧಿಕಾರಿಗಳು ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿ ಬಡ ಜನರಿಗೆ ನ್ಯಾಯ ಒದಗಿಸಬೇಕು ಎಂದರು.
ಕರ್ನಾಟಕ ಭೀಮಸೇನಾ ಬೆಂ.ಗ್ರಾ.ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ 1980ರಿಂದ ಸುಮಾರು 30ವರ್ಷಗಳಿಂದಲೂ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಭೂ ಸ್ವಾಧೀನಾಭವದಲ್ಲಿರುವ ಬಡ ಜನರು ವಾಸಿಸುತ್ತಿರುವ ಜಮೀನನ್ನು ಅಕ್ರಮ ದಾಖಲೆ ಮಾಡಿ ಭೂಗಳ್ಳರ ಹೆಸರಿಗೆ ಮಾಡಿಕೊಟ್ಟಿದ್ದು ಅದನ್ನು ಮಾರಾಟ ಮಾಡಲು ಸಹ ಭೂಗಳ್ಳರು ಮುಂದಾಗಿದ್ದು ಬಡವರಿಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ, ಮುಂದಿನ ದಿನಗಳಲ್ಲಿ “ನಮ್ಮ ಭೂಮಿ ನಮ್ಮ ಹಕ್ಕು” ಗ್ರಾಮಸ್ಥರ ಸಮ್ಮುಖದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಮಲ್ಲೇಪುರ ಗ್ರಾಮಸ್ಥರಾದ ಮುನಿಶಾಮಪ್ಪ ಮತ್ತು ಮುನಿರಾಜು, ಮುಖಂಡರುಗಳಾದ ಎಂ. ಶ್ರೀನಿವಾಸ್, ಎಂ.ಎಸ್. ಶ್ರೀನಿವಾಸ್, ರಮೇಶ್, ಪೂಜಪ್ಪ, ಮುನಿಯಮ್ಮ ಸೇರಿದಂತೆ ನಿವೇಶನಗಳ ವಾರಸುದಾರರು ಮಲ್ಲೇಪುರ ಗ್ರಾಮಸ್ಥರು ಭಾಗಿಯಾಗಿದ್ದರು.