ಕನಕಪುರ: ತಾಲ್ಲೂಕು ಆರಾಧನಾ ಸಮಿತಿಗೆ ನೇಮಕ ಗೊಂಡಿರುವ ಅಧ್ಯಕ್ಷರು, ಸದಸ್ಯರು ಶನಿವಾರ ತಾಲೂಕು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ತಾಲೂಕು ಆರಾಧನಾ ಸಮಿತಿ ಅಧ್ಯಕ್ಷರಾಗಿ ರಂಗಯ್ಯ ಮತ್ತು ಸದಸ್ಯರಾಗಿ ಎಚ್.ಕೆ.ಸಾಂಭಶಿವ, ಮಹದೇವಮ್ಮ ಸಾವಂದಿಗೌಡ, ನಾಗರಾಜು ಹಾಗೂ ಮಲ್ಲೇಶ್ ಶನಿವಾರ ಅಧಿಕಾರ ಸ್ವೀಕರಿಸಿದರು,
ರಾಜ್ಯ ಸರ್ಕಾರವು ಆರಾಧನಾ ಯೋಜನೆಯ ಅನುಷ್ಠಾನಕ್ಕಾಗಿ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆರಾಧನಾ ಸಮಿತಿಗಳನ್ನು ರಚನೆ ಮಾಡಿದ್ದು ಕನಕಪುರ ತಾಲೂಕು ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಗೆ ತೋಟಹಳ್ಳಿ ಗ್ರಾಮದ ಎಲೆ ರಂಗಣ್ಣ ಅವರನ್ನು ಅಧ್ಯಕ್ಷರಾಗಿ,ಹುಣಸನ ಹಳ್ಳಿ ಎಚ್ ಕೆ ಸಾಂಭಶಿವ, ವಡ್ಲೇಗೌಡನದೊಡ್ಡಿಯ ಮಹದೇವಮ್ಮ ಸಾವಂದಿಗೌಡ, ನಾರಾಯಣಪುರದ ನಾಗರಾಜು (ನಾಗ), ಹೂಳ್ಯ ಹೊಸ ದೊಡ್ಡಿಯ ಮಲ್ಲೇಶ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಸಮಿತಿಯಲ್ಲಿ ಕ್ಷೇತ್ರದ ಶಾಸಕರು, ತಾಲ್ಲೂಕು ತಹಶೀಲ್ದಾರ್ ಜಿಲ್ಲಾ ಪಂ. ಇಂಜಿನಿಯರ್, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಸದಸ್ಯರಾಗಿರುತ್ತಾರೆ,ಶನಿವಾರ ತಾಲ್ಲೂಕು ಆಡಳಿತ ಸೌಧದಲ್ಲಿರುವ ಜಿಲ್ಲಾ ಪಂಚಾಯಿತಿ ಎಇಇ ಕಚೇರಿಯಲ್ಲಿ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರು ಅಧಿಕಾರ ಸ್ವೀಕರಿಸಿದರು,ಸಮಿತಿಯ ನೂತನ ಅಧ್ಯಕ್ಷ ಮತ್ತು ಸದಸ್ಯರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಅಭಿನಂದಿಸಿದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ದಿಲೀಪ್,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗರಾಜು,ನಗರ ಸಭೆ ಸದಸ್ಯ ಮಳಗಾಳು ಕಾಂತಣ್ಣ,ಕುರುಪೇಟೆ ಜಗದೀಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅಧ್ಯಕ್ಷ ಮತ್ತು ಸದಸ್ಯರಿಗೆ ಅಭಿನಂದಿಸಿದರು.