ತಿ.ನರಸೀಪುರ: ಶಕ್ತಿ ಯೋಜನೆ ರಾಜ್ಯದಲ್ಲಿ ತುಂಬಾ ಉತ್ತಮ ಯೋಜನೆಯಾಗಿದೆ. ಆದರೆ, ಎಷ್ಟೋ ಕಡೆಗಳಿಗೆ ಬಸ್ ವ್ಯವಸ್ಥೆ ಇಲ್ಲದೆ ಶಾಲಾ ಮಕ್ಕಳಿಗೆ ತೊಂದರೆ ಉಂಟಾಗಿದೆ ಎಂದು ಗ್ಯಾರೆಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಮಹಾದೇವಪ್ರಭು ಬೇಸರ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಹಾದೇವ ಪ್ರಭು ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸರ್ಕಾರದ ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನಭಾಗ್ಯ, ಗೃಹ ಜ್ಯೋತಿ ಪಂಚ ಗ್ಯಾರಂಟಿಯ ಉಪಯೋಗ ಮತ್ತು ತೊಂದರೆಗಳ ಬಗ್ಗೆ ಐದು ಗ್ಯಾರಂಟಿಗಳ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಶಕ್ತಿ ಯೋಜನೆಯಿಂದ ಇಲಾಖೆಗೆ ಅನುಕೂಲ ವಾಗಿರಬಹುದು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ತಿ.ನರಸೀಪುರ ದಿಂದ ತಲಕಾಡು ಮತ್ತು ಕಲಿಯೂರು ಮುಳ್ಳೂರು ಮಾರ್ಗ ಕೊಳ್ಳೇಗಾಲಕ್ಕೆ ಬಸ್ ವ್ಯವಸ್ಥೆ ಇರುವುದಿಲ್ಲ ಹಾಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಿ ಬರಲು ತುಂಬಾ ತೊಂದರೆ ಉಂಟಾಗಿದೆ ಎಂದು ಪರಶಿವಮೂರ್ತಿ ಹೇಳಿದರು.
ಗೃಹಲಕ್ಷ್ಮಿಯಲ್ಲಿ 513 ಜನ ಫಲಾನುಭವಿಗಳು, ಗೃಹ ಜ್ಯೋತಿಯಲ್ಲಿ 479 ಯುವ ನಿಧಿಯಲ್ಲಿ 80 ಜನ ಫಲಾನುಭವಿಗಳು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ ಮುಂದಿನ ಸಭೆಯಲ್ಲಿ ವಂಚಿತರಾಗಿರುವ ಎಲ್ಲಾ ಫಲಾನುಭವಿಗಳನ್ನು ಗುರುತಿಸಿ ಸವಲತ್ತುಗಳು ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಸರ್ಕಾರ ಸರ್ಕಾರದ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು ಅಧಿಕಾರಿಗಳಿಗೆ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಮಹಾದೇವ ಪ್ರಭು ತಾಕಿತು ಮಾಡಿದರು.
ಶಕ್ತಿ ಯೋಜನೆಯಿಂದ ಫಲಾನುಭವಿಗಳು ತುಂಬಾ ಉಪಯೋಗ ಪಡೆದುಕೊಂಡಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಸಮರ್ಪವಾಗಿ ಬಸ್ಸು ಬರುತ್ತಿಲ್ಲ ಮತ್ತು ವಿದ್ಯಾರ್ಥಿಗಳಿಗೆ ಬಸು ನಿಲ್ಲಿಸುವುದಿಲ್ಲ ಮತ್ತು ಟಿಕೆಟ್ ಅನ್ನು ಬೇಕಾಬಿಟ್ಟಿ ಎಂದು ಸಾರ್ವಜನಿಕ ವಲಯದಲ್ಲಿ ಬರುತ್ತಿದೆ ಸಮರ್ಪಕ್ಕಾಗಿ ಕರ್ತವ್ಯ ನಿರ್ವಹಿಸಿ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನ್ನಭಾಗ್ಯ ಯೋಜನೆ ಬಗ್ಗೆ ನ್ಯಾಯ ಬೆಲೆ ಅಂಗಡಿಯಲ್ಲಿ. ವಿತರಿಸುವ ವೇಳೆಯನ್ನು ಪ್ರಕಟಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಈ ಸಂದರ್ಭದಲ್ಲಿ ಕೇತಹಳ್ಳಿ ಸಿದ್ದಶೆಟ್ಟಿ, ಮಂಜು, ಕುಪ್ಯಗ್ರಾ.ಪಂ ಅಧ್ಯಕ್ಷ ಗವಿಸಿದ್ದಯ್ಯ, ಪರಶಿವ,ಸಲೀಮ್, ಮಹಮದ್ ಸಲ್ಮಾನ್,ತಾಲೂಕು ಪಂಚಾಯತಿ ಇ.ಓ ಅನಂತರಾಜು, ತಾಲೂಕು ಪಂಚಾಯತಿ ಯೋಜನಾಧಿಕಾರಿ ರಂಗಸ್ವಾಮಿ, ಚೆಸ್ಕಾಂ ಎಇಇ ವೀರೇಶ್, ಸಿ.ಡಿ.ಪಿ.ಓ ಗೋವಿಂದರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.