ಬೆಳಗಾವಿ: 9 ತಿಂಗಳ ಗರ್ಭಿಣಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ನಡೆದಿದೆ.ಸುವರ್ಣ ಮಾಂತಯ್ಯಮಠಪತಿ (33) ಎಂಬಾಕೆಯನ್ನೇ ಬರ್ಬರವಾಗಿ ಥಳಿಸಿದ ಪರಿಣಾಮ ಆಕೆ ತೀವ್ರ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುವರ್ಣ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ.ಈಗಾಗಲೇ ಮೃತಳಿಗೆ 4 ಹೆಣ್ಣುಮಕ್ಕಳಿದ್ದು, ಐದನೇ ಬಾರಿಗೆ ಗರ್ಭಿಣಿಯಾಗಿದ್ದರು ಎನ್ನಲಾಗಿದ್ದು, ಮುಂದಿನ ವಾರ ಹೆರಿಗೆಗೆ ದಿನಾಂಕ ನಿಗಧಿಯಾಗಿತ್ತು.