ಬೆಂಗಳೂರು: ತೋಟದಲ್ಲಿ ತೆಂಗಿನಕಾಯಿ ಕೀಳುವ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಗಲಾಟೆಯಾಗಿ ಸಿದ್ದರಾಜು ನಾಯ್ಕ (35) ವ್ಯಕ್ತಿಯನ್ನು ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹುರಳಹಳ್ಳಿ ಗ್ರಾಮದಲ್ಲಿರುವ ತೋಟಕೆ ಎಳನೀರು ತೆಂಗಿನಕಾಯಿ ಕೀಳವ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಜಗಳ ವಿಕೋಪಕ್ಕೆ ಹೋಗಿ ಮಂಜು ನಾಥ್ ಮತ್ತು ಆತನ ಸಹಚರ ಸೇರಿ ಸಿದ್ದರಾಜು ನಾಯಕನನ್ನು ಕೊಲೆ ಮಾಡಿರುತ್ತಾರೆ.ನೆಲಮಂಗಲ ಗ್ರಾಮಾಂತರ ಪೆÇಲೀಸರು ಕೊಲೆ ಮುಖದ್ದಮೆ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿರುತ್ತಾರೆ.