ಲಾಹೋರ್: ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ 39 ದಿನಗಳು ಬಾಕಿ ಉಳಿದಿವೆ. ಈ ನಡುವೆ, ಲಾಹೋರಿನ ಗಡಾಫಿ ಮತ್ತು ಕರಾಚಿಯ ನ್ಯಾಶನಲ್ ಬ್ಯಾಂಕ್ ಕ್ರೀಡಾಂಗಣದಲ್ಲಿ ಪೂರ್ವ ಸಿದ್ದತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇದಕ್ಕೆ, ಕೌಂಟರ್ ಕೊಡುವಂತೆ ಪಿಸಿಬಿ ((Pakistan Cricket Board) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಸಿದ್ದತೆಗಳು ಸರಿಯಾಗಿ ನಡೆಯುತ್ತಿಲ್ಲ, ಆಮೆಗತಿಯಲ್ಲಿ ಕಾಮಗಾರಿಗಳು ಸಾಗುತ್ತಿದೆ ಎಂದೆಲ್ಲಾ ವರದಿಯಾಗಿತ್ತು. ಇದರ ಹಿನ್ನಲೆಯಲ್ಲಿ, ಚಾಂಪಿಯನ್ಸ್ ಟ್ರೋಫಿ ಸಂಪೂರ್ಣವಾಗಿ ಗಲ್ಫ್ ರಾಷ್ಟ್ರಕ್ಕೆ (ದುಬೈ, ಶಾರ್ಜಾ) ಶಿಫ್ಟ್ ಆಗಬಹುದು ಎನ್ನುವ ವಿಷಯಗಳು ಮುನ್ನಲೆಗೆ ಬರುತ್ತಿದೆ.ಐಸಿಸಿಯು, ಪಿಸಿಬಿಗೆ ಜನವರಿ25ರ ಡೆಡ್ಲೈನ್ ಅನ್ನು ನೀಡಿದೆ. ಈ ದಿನಾಂಕದೊಳಗೆ, ಚಾಂಪಿಯನ್ಸ್ ಟ್ರೋಫಿ ನಡೆಯುವ ಕ್ರೀಡಾಂಗಣಗಳು ಸಿದ್ದಗೊಂಡಿರಬೇಕು ಎನ್ನುವ ಫರ್ಮಾನ್ ಅನ್ನು ಐಸಿಸಿ ಹೊರಡಿಸಿತ್ತು. ಇದಕ್ಕೆ ಓಕೆ ಎಂದಿರುವ ಪಿಸಿಬಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನದ ನಡುವೆ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿಯಾಗಿ ತ್ರಿಕೋಣ ಸರಣಿ ನಡೆಯುತ್ತಿದೆ. ಅಸಲಿಗೆ, ಈ ಎಲ್ಲಾ ಪಂದ್ಯಗಳು ಮುಲ್ತಾನ್ ನಲ್ಲಿ ಆಡಲು ಪಿಸಿಬಿ ಸಿದ್ದತೆ ಮಾಡಿಕೊಂಡಿತ್ತು. ಈಗ, ಈ ತ್ರಿಕೋಣ ಸರಣಿಯ ಸ್ಥಳವನ್ನು ಬದಲಿಸಿದೆ.ಯಾವ ಕ್ರೀಡಾಂಗಣ ಸದ್ಯದ ಪರಿಸ್ಥಿತಿಯಲ್ಲಿ ಆಡಲು ಅನ್ ಫಿಟ್ ಎಂದು ಇದೆಯೋ, ಆ ಎರಡು ಕ್ರೀಡಾಂಗಣದಲ್ಲೇ, ತ್ರಿಕೋಣ ಸರಣಿ ನಡೆಸಲು ನಿರ್ಧರಿಸಿದೆ. ಹಾಗಾಗಿ, ತ್ರಿಕೋಣ ಸರಣಿಯು, ಮುಲ್ತಾನ್ ನಿಂದ ಕರಾಚಿ ಮತ್ತು ಲಾಹೋರಿಗೆ ಶಿಫ್ಟ್ ಆಗಿದೆ. ಐಸಿಸಿಯ ಟಾಸ್ಕ್ ಫೋರ್ಸ್ ಈ ವಾರಾಂತ್ಯದಲ್ಲಿ ಲಾಹೋರ್ ಮತ್ತು ಕರಾಚಿ ನಗರಕ್ಕೆ ಭೇಟಿ ನೀಡಲಿದೆ. ಗಡಾಫಿ ಮತ್ತು ನ್ಯಾಶನಲ್ ಕ್ರೀಡಾಂಗಣದ ಸೌಕರ್ಯವನ್ನು ಅವಲೋಕಿಸಲಿದೆ. ನಂತರ, ವರದಿಯನ್ನು ಐಸಿಸಿಗೆ ನೀಡಲಿದೆ. ಸದ್ಯದ ಮಾಹಿತಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿ, ಪಾಕಿಸ್ತಾನ ಮತ್ತು ಯುಎಇನಲ್ಲೇ ಆಡಲಾಗುತ್ತದೆ.