ದೊಡ್ಡಬಳ್ಳಾಪುರ: ತಾಲ್ಲೂಕು ವೀರಶೈವ ಲಿಂಗಾಯತಸಮಾಜ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದಿಂದ ನಗರದ ತಾಲ್ಲೂಕು ಕಚೇರಿ ಸಮೀಪದ ಬಸವೇಶ್ವರ ವೃತ್ತದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಾಸೋಹ ದಿನಾಚರಣೆ ಮಂಗಳವಾರ ನಡೆಯಿತು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹದಿಂದ ಸಾವಿರಾರು ಜನ ವಿದ್ಯಾವಂತರಾಗಿ ಬದುಕು ರೂಪಿಸಿ- ಕೊಂಡಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಇಂದಿಗೂ ಮಠದಲ್ಲಿ ಮುಂದುವರೆದಿರುವ ತ್ರಿವಿಧ ದಾಸೋಹ ನಾಡಿನ ಸಾವಿರಾರು ಜನರಿಗೆ ಆಸರೆಯಾಗಿ ನಿಂತಿರುವುದನ್ನು ಸ್ಮರಿಸಲಾಯಿತು.ಶಾಸಕ ಧೀರಜ್ ಮುನಿರಾಜು, ತಹಸೀಲ್ದಾರ್ ವಿಭಾವಿದ್ಯಾ ರಾಥೋಡ್, ನಗರಸಭೆ ಅಧ್ಯಕ್ಷೆ ಸುಮಿತ್ರಾ, ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಕಾರ್ತಿಕೇಶ್ವರ್,
ನಗರಸಭೆ ಸದಸ್ಯ ತ.ನ.ಪ್ರಭುದೇವ್, ತಾಲೂಕು ವೀರಶೈವ ಲಿಂಗಾಯತ ಪುರುಷರ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಪಾಪಣ್ಣ, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸುಜಯ್, ಮಹಿಳಾ ಘಟಕದ ಅಧ್ಯಕ್ಷೆ ಕೋಮಲಾ ನಟರಾಜ್, ಸೋಮೇಶ್ವರ ದೇವಾಲಯದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಲಿಂಗಾಯತ ವೀರಶೈವ ಮಹಾಸಭೆ ಹಿರಿಯ ಮುಖಂಡರಾದ ಎಸ್.ಜಿ.ಸೋಮರುದ್ರಶರ್ಮ, ಶಿವಾನಂದಪ್ಪ, ಬಸವರಾಜು, ಆರ್.ಎಸ್.ಮಂಜುನಾಥ್, ಎಸ್. ಪ್ರಕಾಶ್, ಜೆ.ವೈ.ಮಲ್ಲಪ್ಪ,ಜೋ.ನ.ಮಲ್ಲಿಕಾರ್ಜುನ್, ಜೆ.ಎಸ್.ಮಂಜುನಾಥ್, ದರ್ಗಾಜೋಗಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ ನಾಗರಾಜು ಉಪಸ್ಥಿತರಿದ್ದರು.