ಬೆಂಗಳೂರು : ಸಾಹಿತಿ ಡಾ. ಗುಣವಂತ ಮಂಜು ಅಧ್ಯಕ್ಷತೆಯ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಇಂಟರ್ನ್ಯಾಷನಲ್ ಅಚೀವರ್ಸ್ ಕೌನ್ಸಿಲ್ ಜಂಟಿಯಾಗಿ ಥೈಲ್ಯಾಂಡ್ ದೇಶದ ಪ್ರವಾಸ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಿತ್ತು.
ಕರ್ನಾಟಕ ರಾಜ್ಯದ ವಿವಿಧ ಕ್ಷೇತ್ರದ ಅಪ್ರತಿಮ ಸಾಧಕರು ಇಂಟರ್ನ್ಯಾಷನಲ್ ಗೋಲ್ಡ್ ಸ್ಟಾರ್ ಪ್ರಶಸ್ತಿಗೆ ಬಾಜನರಾದರು.
ಅಂತರ ರಾಷ್ಟ್ರೀಯ ನೆಲದಲ್ಲಿ ಕನ್ನಡದ ಸಾಧಕರನ್ನು ಗೌರವಿಸುವ ಮೂಲಕ ನಾಡಿನ ಸಾಂಸ್ಕೃತಿಕ ಸೊಬಗನ್ನು ತೋರಲಾಯಿತು.ಡಾ. ಸತೀಶ್ ಜಿ.ಎಸ್, ಡಾ. ಶ್ರೀನಿವಾಸ್ ಬಾಬು, ಡಾ, ಟಿ.ವಿ ಸಂಪಂಗಿ, ಡಾ.ಎಚ್ ಪುಷ್ಪಲತ ಗೌಡ, ಡಾ.ಪ್ರಕಾಶ್ ಹೆಚ್.ಸಿ, ಡಾ. ಮೀನಾ ಕುಮಾರಿ ಟಿ.ಡಿ, ಡಾ. ಸುಬ್ರಮಣ್ಯ ಶರ್ಮ ಗುರೂಜಿ, ಶ್ರೀಮತಿ ಆಶಾ ಕೆ.ಇ, ಶ್ರೀಮತಿ ವೆಂಕಟ ಲಕ್ಷ್ಮಮ್ಮ .ಎಚ್, ಶ್ರೀಮತಿ ನಿತ್ಯ ಜಿ.ಎಲ್, ಕುಮಾರಿ ಪೂರ್ಣಿಕ, ಕುಮಾರಿ ಹರ್ಷಿತ, ಶ್ರೀ ದಿಲೀಪ್ ಕುಮಾರ್, ಹಾಗೂ ಬೇಬಿ ಐರಾ ಗೌಡ ಮುಂತಾದ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿವಿಧ ಕ್ಷೇತ್ರದ ಸಾಧನೆಗಾಗಿ ಎಲ್ಲರನ್ನು ಅತ್ಯಂತ ಗೌರವ ಪೂರಕವಾಗಿ ಸನ್ಮಾನಿಸಿ ಪುರಸ್ಕರಿಸಲಾಯಿತು. ಐದು ದಿನಗಳ ಥೈಲ್ಯಾಂಡ್ ದೇಶದ ಪ್ರವಾಸದಲ್ಲಿ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಲಾಯಿತು. ಶಾಂತಿಯ ಸಂಕೇತವಾದ ಭಗವಾನ್ ಬುದ್ಧನ ದರ್ಶನ ಎಲ್ಲರಲ್ಲೂ ಧನ್ಯತಾ ಭಾವವನ್ನು ತರಿಸಿತು.
ಭಾರತೀಯರೇ ಅತಿ ಹೆಚ್ಚು ಭೇಟಿ ನೀಡುವ ಪ್ರದೇಶ ಇದಾಗಿದೆ.
ಪ್ರವಾಸೋದ್ಯಮವೇ ಇಲ್ಲಿನ ಜನರ ಮುಖ್ಯ ಉದ್ಯೋಗವಾಗಿದೆ. ಭಾರತೀಯರ ಭೇಟಿಯೇ ಇವರು ಅಲ್ಲಿ ಬದುಕನ್ನು ನಡೆಸಲು ದೊಡ್ಡ ಮಟ್ಟದ ಸಹಕಾರ ನೀಡುತ್ತಿದೆ. ಹಿರಿಯರ ನಾಣ್ಣುಡಿಯಂತೆ ಕೋಶ ಓದಬೇಕು ದೇಶ ಸುತ್ತಬೇಕು ಅದರಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕು ಎನ್ನುವ ಸಂದೇಶವನ್ನು ಆತ್ಮಶ್ರೀ ಬಳಗ ಥೈಲ್ಯಾಂಡ್ ದೇಶದಲ್ಲಿ ಸಾಕ್ಷಿಕರಿಸಿತು.