ಬದುಕು ಎಂದರೆ ನಮ್ಮನ್ನು ನಾವು ಕಂಡುಕೊಳ್ಳುವುದಷ್ಟೇ ಅಲ್ಲ ನಮ್ಮನ್ನು ನಾವು ರೂಪಿಸಿಕೊಳ್ಳುವುದು. ಆರೋಗ್ಯವೇ ಶ್ರೇಷ್ಠ ಭಾಗ್ಯ ಆತ್ಮತೃಪ್ತಿಯೇ ಸರ್ವಶ್ರೇಷ್ಠ ಸಂಪತ್ತು ಆತ್ಮವಿಶ್ವಾಸವೇ ಅತ್ಯುತ್ತಮ ಅನುಬಂಧ. ಪ್ರಾರ್ಥನೆ ಮಾಡುವಾಗ ಹೃದಯವಿಲ್ಲದ ಮಾತುಗಳಿಗಿಂತ ಮಾತಿಲ್ಲದ ಹೃದಯವನ್ನು ಹೊಂದಿರುವುದೇ ಮೇಲು ಮೂರ್ತಿಗಳಲ್ಲಿ ಭಗವಂತ ನೆಲೆಸುವುದಿಲ್ಲ ನಮ್ಮ ಆಲೋಚನೆಗಳಲ್ಲಿ ದೇವರಿರುತ್ತಾನೆ ನಮ್ಮ ಆತ್ಮವೇ ಆತನಿಗೆ ದೇಗುಲ ಸನ್ನಡತೆಯೇ ಆರಾಧನೆ ಎಂದು ನಂಬಿದ್ದ ಮನುಜ ಮತ ವಿಶ್ವ ಪಥದ ದಾರ್ಶನಿಕರಾದ ನಾಡೋಜಾ ಗೋರು ಚೆನ್ನಬಸಪ್ಪ ರವರನ್ನು 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳುವ ಮುನ್ನ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಸುಪುತ್ರ ಮುಕ್ತ ಡಾಕ್ಟರ್ ಬಸವರಾಜ್ ಕಾಗಲಿ ಅವರೆಲ್ಲರೂ ಇರುವ ಪ್ರಣಾಮ ಮನೆಯ ಮುಂದಣ ಅಂಗಳದಲ್ಲಿ ಸಂಭ್ರಮದ ಹೆಮ್ಮೆಯ ಅವಿಸ್ಮರಣೆಗೆ ಸಾಕ್ಷಿಯಾಯಿತು.
ಅಂದು ಸೂರ್ಯೋದಯವೂ ಹರ್ಷದಿ ಹರಸುತ್ತಾ ನವಿರಾದ ಶುಭ್ರ ಕಿರಣಗಳು ಹೆಮ್ಮೆಯಿಂದ ಪ್ರನಾಮಿಸಿದವು ಧನ್ಯೋಸ್ಮಿ… ಧನ್ಯೋಸ್ಮಿ… ಧನ್ಯೋಸ್ಮಿ ಎಂದು ನುಡಿಯಿತು.
ಅಧ್ಯಕ್ಷರು ಸಮ್ಮೇಳನ ಸ್ವಾಗತ ಸಮಿತಿ ಜಾನಪದ ಭೀಷ್ಮ ಅಕ್ಷರ ಜಂಗಮ ಗೋರುಚ ಅವರನ್ನು ಸಮ್ಮೇಳನಕ್ಕೆ ಬರಮಾಡಿಕೊಳ್ಳಲು ಎಸ್ಕಾರ್ಟ್ ವ್ಯವಸ್ಥೆ ಮಾಡಿತು ಅದರಂತೆ ಚಿನ್ನಾರಿ ಮುತ್ತುಗಳು ಉತ್ಸಾಹದ ಕಾರಂಜಿ ಚಿಮ್ಮುತ್ತಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳೆಲ್ಲರೂ ಶುಭ ಹಾರೈಸಿ ಸಲ್ಯೂಟ್ ಮಾಡಿ ಬೀಳ್ಕೊಟ್ಟರು ಅಲ್ಲಿಂದ ಮುನ್ನಡೆದ ಕನ್ನಡ ಬಾವುಟ ಹಾರಾಡುತ್ತಿದ್ದ ಕಾರು ಬಿಡದಿ ಚನ್ನಪಟ್ಟಣ ಮದ್ದೂರು ನಂತರ ಮಂಡ್ಯದವರೆಗೆ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ರಸ್ತೆಯ ಎರಡು ಬದಿಯಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು ಅಲ್ಲಿಂದ ಮುಂದೆ ದೇವಲೋಕದ ದೃಶ್ಯವೇ ಧರೆಗೆ ಬಂದಂತಹ ಸನ್ನಿವೇಶ ಮಂಡ್ಯದ ಪ್ರವೇಶ ದ್ವಾರದಲ್ಲಿ ಮಾನ್ಯ ಎನ್ ಚೆಲುವರಾಯಸ್ವಾಮಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು ಸಮ್ಮೇಳನ ಸ್ವಾಗತ ಸಮಿತಿ ಮತ್ತು ಡಾಕ್ಟರ್ ಕುಮಾರ್ ಜಿಲ್ಲಾಧಿಕಾರಿಯವರು ಗಣ್ಯಮಾನ್ಯರು ಎಂಎಲ್ಎ ಎಂಎಲ್ಸಿ ರವರು ಪದ್ಮಶ್ರೀ ಗೋರುಚರವರ ಆಪ್ತ ಬಂದು ಬಳಗ ಅಭಿಮಾನಿಗಳು ರಸ್ತೆಯುದ್ಧಕ್ಕೂ ಹೆತ್ತ ನೋಡಿದತ್ತ ಪುಷ್ಪಾರ್ಚನೆ ಮಾಡುತ್ತಾ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆಯ ಕನ್ನಡದ ಘೋಷಣೆಗಳು ಮುಗಿಲೆತ್ತರಕ್ಕೂ ಕೇಳುವಂತೆ ಮಾಡುತ್ತಿದ್ದರು ಅಲ್ಲಿಂದ ಪೊಲೀಸ್ ಬ್ಯಾಂಡ ನ ಪರೇಡ್ ಮೂಲಕ ಜಿಲ್ಲಾಧಿಕಾರಿಯವರ ಮನೆಗೆ ಕರೆದು ಇದು ಅಲ್ಲಿ ಅತ್ಯಂತ ಗೌರವದರಗಳಿಂದ ಗೋರುಚರವರನ್ನು ಸನ್ಮಾನಿಸಿ ಅಮರಾವತಿ ಕೋಣೆ ಸಂಖ್ಯೆ ೩೦೧ ಹೋಟೆಲ್ ಗೆ ಬರುವವರೆಗೂ ಅದ್ದೂರಿಯ ವೈಭವ ಸಂಭ್ರಮ ಮೈ ರೋಮಾಂಚನಗೊಳಿಸಿತು ಕಾರಣ ಇಲ್ಲಿಯವರೆಗೆ ಜರುಗಿದ ಎಲ್ಲಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪೊಲೀಸ್ ಬ್ಯಾಂಡ್ ಪರೇಡ್ ಸ್ವಾಗತಿಸಿದ್ದು ನಮ್ಮೆಲ್ಲರ ಹೆಮ್ಮೆಯ ನಾಡೋಜ ಗೋರುಚಾ ರವರು ಪ್ರಥಮರು ಅದು ಚರಿತ್ರೆಯ ಸುವರ್ಣಾಕ್ಷದಲ್ಲಿ ದಾಖಲಾಯಿತು.
ಶುಭ ಶುಕ್ರವಾರ ಮುಂಜಾನೆ ಧ್ವಜಾರೋಹಣದ ನಂತರ ಸುಂದರವಾಗಿ ಅಲಂಕರಿಸಿದ ಸಾರೋಟದಲ್ಲಿ ವಿಜಯೋತ್ಸವದ ವಿಜೃಂಭಣೆ ಮೆರವಣಿಗೆಯಲ್ಲಿ ಜನಪದ ಗೀತೆ ದಾಶವಾಣಿ ಭರತನಾಟ್ಯ ಡೊಳ್ಳಿನ ಜಾನಪದ ನೃತ್ಯ ಪಳ್ಳಿೀರ್ ನೃತ್ಯ ಜೋಗಿ ಪದ ಮಂಡ್ಯ ಸದ್ವಿದ್ಯಾತಂಡದಿಂದ ಚಿಂದರ ಜೋಗಿ ರಂಗುರಂಗಿನ ವೇಷಭೂಷಣದಿಂದ ಸುಮಾರು ಆರು ಕಿಲೋಮೀಟರ್ ದೂರದವರೆಗೆ ಸತತ ಮೂರು ಗಂಟೆಯ ವಿವಿಧ ಜಾನಪದ ತಂಡಗಳು ದಣಿವರಿಯದ ದೇವತಾ ಮನುಷ್ಯ ಡಾಕ್ಟರ್ ಗೋರುಚ ಅವರೊಂದಿಗೆ ಊರುಗೋಲಾಗಿದ್ದವರು ಡಾಕ್ಟರ್ ಮುಕ್ತರವರು ಮತ್ತಷ್ಟು ಮೆರಗು ತಂದವರು ಪ್ರಧಾನ ವೇದಿಕೆಗೆ ಸಾರೋಟನಲ್ಲಿ ಕುಳಿತು ಸಮಸ್ತ ಅಭಿಮಾನಕ್ಕೆ ಆಪ್ತತೆ ಗೌರವವನ್ನು ತಂದವರು ಮುಕ್ತಾರವರು ಅಪ್ಪಾಜಿ ಗೋರುಚವರ ಬದುಕಿನ ಏಳುಬೀಳಿನ ಎಲ್ಲಾ ಮೆಟ್ಟಿಲುಗಳಲ್ಲಿ ಜೊತೆಯಾಗಿ ದಿಟ್ಟತನದಿಂದ ನಿಂತವರು ಅಂದಿನ ಅವರ ಎದೆಗಾರಿಕೆಗೆ ಮಹಾ ತ್ಯಾಗಕ್ಕೆ ಮಹಾಪ್ರತಿಫಲ ಎನ್ನುವಂತೆ ವಿಶ್ವದ ಸಮಸ್ತ ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವಂತೆ ಮುಕ್ತ ಮನಸ್ಸಿನಿಂದ ನಗುನಗುತ್ತಾ ಎಲ್ಲರ ಅಭಿಮಾನವನ್ನು ನಮಸ್ಕರಿಸುತ್ತಾ ಶರಣಾರ್ಥಿಗಳನ್ನು ಹೃದಯ ತುಂಬಿ ಹೇಳುತ್ತಿದ್ದರು.
ಕನ್ನಡಿಗರೆಲ್ಲರ ಜಯ ಘೋಷಗಳು ದಾರಿ ಯುದ್ಧಕ್ಕೂ ಶಾಲಾ- ಕಾಲೇಜು ವಿಶ್ವವಿದ್ಯಾಲಯ ಅಂಗನವಾಡಿ ಶಿಕ್ಷಕರು ಅಷ್ಟೇ ಅಲ್ಲದೆ ನಾಡಿನ ಮೂಲೆ ಮೂಲೆಯಿಂದ ಬಂದ ಕನ್ನಡ ಅಭಿಮಾನಿಗಳು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಂತಹ ಎತ್ತಿನ ಬಂಡೆಯಲ್ಲಿ ಬಂದು ಗ್ರಾಮೀಣರು ಹೃದಯ ತುಂಬಿ ಬರುವ ವಿಸ್ಮಯದ ಅತ್ಯದ್ಭುತವಾದ ಹಳ್ಳಿಯ ಸೊಗಡಿನ ನೋಟ ಅಕ್ಷರದಿಂದ ಅಕ್ಷರದ ಜಾತ್ರೆಗೆ ಗೌರವಿಸಿದ ಆ ಕ್ಷಣಗಳು ಬದುಕಿನುದ್ದಕ್ಕೂ ಮೆದುಳಿಗೆ ಗಟ್ಟಿಯಾದ ಪೌಷ್ಟಿಕಾಂಶವೆಂದು ಹೇಳಬಹುದು ತದನಂತರ ಪ್ರಧಾನ ವೇದಿಕೆಯಲ್ಲಿ ಹೊಂಬಾಳೆ ಅರಳುವ ಗುಚ್ಛವನ್ನು ಉದ್ಘಾಟಿಸಿ ಲಕ್ಷಾಂತರ ಜನರ ಎದುರಿನಲ್ಲಿ ಬೆಲ್ಲದಾರತಿ ಮತ್ತು ಸಮ್ಮೇಳನ ಅಧ್ಯಕ್ಷರ ಕೃತಿ, ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸೆಚಾರ ಬಿಡುಗಡೆಯಾಯಿತು ವಿಭಿನ್ನ ವಿಶಿಷ್ಟ ವೈಭವದ ಸಮ್ಮೇಳನದಿಂದ ಪದ್ಮಶ್ರೀ ನಾಡೋಜ ಡಾಕ್ಟರ್ ಅವರಿಗೆ ಸಂತೃಪ್ತಿ ಸಮಾಧಾನ ಆತ್ಮಭಿಮಾನ ಬದುಕಿನ ಸಾರ್ಥಕತೆ ವಿಜಯೋತ್ಸವದೊಂದಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ಎಂಬತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಒಂದು ಹೊಸ ಮೈಲುಗಲ್ಲು ಎಂದು ಇತಿಹಾಸವು ತನ್ನ ಚರಿತ್ರೆಯ ಪುಟದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹೃದಯ ತುಂಬಿ ಸ್ಮರಿಸುತ್ತಾ ಪ್ರಧಾನ ವೇದಿಕೆಯ ಒಂದೊಂದು ಮೆಟ್ಟಿಲನ್ನು ಅನುಭವ ಮಂಟಪದ ವೇದಿಕೆ ಎಂದೇ ತಿಳಿದು ಗೌರವಿಸುತ್ತಾ ಧನ್ಯತ ಭಾವದಿಂದ ಎಲ್ಲರಿಗೂ ಕೈಮುಗಿದು ಹರ್ಷ ಸಂತೃಪ್ತರಾದರು.
ಲೇಖನ ಬರೆದವರು..
ಇಂದು ಸಂಜೆ ಪತ್ರಿಕೆಯ ಡಾಕ್ಟರ್ ಜಿ. ವೈ ಪದ್ಮ ನಾಗರಾಜು ಮತ್ತು ಡಾಕ್ಟರ್ ಸಮತಾ ಬಿ ದೇಶಮಾನೆ.