ದತ್ತಾತ್ರೇಯ ಜನನ:ಹಿಂದು ಧಾರ್ಮಿಕ ಪದ್ಧತಿಯಲ್ಲಿ ದತ್ತಾತ್ತೇಯರ ಜನನದ ಸ್ವಾರಸ್ಯ ಬಹಳ ವಿಶೇಷವಾಗಿದೆ. ಹಿಂದೊಮ್ಮೆ ಲಕ್ಷ್ಮಿ ಸರಸ್ವತಿ ಪಾರ್ವತಿಯಲ್ಲಿ ತಮ್ಮ ಪಾತಿವ್ರತ್ಯವೇ ಶ್ರೇಷ್ಠವೆಂಬ ಚರ್ಚೆ ನಡೆಯುತ್ತಿತ್ತು. ಆದರೆ ಶ್ರೇಷ್ಠ ಪತಿವ್ರತೆಯಾರೆಂದು ಕೇಳಿದಾಗ ಅವರಿಗೆ ಉತ್ತರವಾಗಿ ಅನುಸೂಯಾದೇವಿ ಎಂಬ ಉತ್ತರ ದೊರೆತಾಗ, ತ್ರಿಮೂರ್ತಿಗಳ ಪತ್ನಿಯರು ತಮ್ಮ ತಮ್ಮ ಗಂಡಂದಿರಿಗೆ ಅನುಸೂಯಾ ದೇವಿಯ ಪಾತಿವ್ರತ್ಯ ಪರೀಕ್ಷೆಗಾಗಿ ಅತ್ರಿ ಋಷಿಗಳ ಮನೆಗೆ ಕಳುಹಿಸಿದರು. ತ್ರಿಮೂರ್ತಿಗಳು ಸನ್ಯಾಸಿಗಳ ವೇಷದಲ್ಲಿ ಅತ್ರಿ ಆಶ್ರಮಕ್ಕೆ ಬಂದು ಭಿಕ್ಷೆಯನ್ನು ಬೇಡಿದರು.
ಹಸಿವಾರುವುದಾಗಿಯೂ ಮತ್ತು ಊಟ ಮಾಡಲು ಅವರದೊಂದು ಶರತ್ತು ಇದೆ ಎಂದು ಹೇಳಿದರು.ಭೀಕ್ಷಾರ್ಥಿಯಾಗಿ ಬಂದ ಯಾರನ್ನೂ ಉಪವಾಸ ಕಳುಹಿಸದೇ ಇರುವುದು ಆಶ್ರಮಗಳ ಪದ್ಧತಿಯಾಗಿರುವುದರಿಂದ ನಿಮ್ಮ ಶರತ್ತು ಒಪ್ಪಿಗೆ ಇವೆ. ನೀವು ಭೋಜನವನ್ನು ಸ್ವೀಕರಿಸಿ ಎಂದಳು ಅನುಸೂಯಾ ದೇವಿ. ನಮಗೆ ಹುಟ್ಟು ಬಟ್ಟೆಯಲ್ಲೇ ಊಟಕ್ಕೆ ಬಡಿಸಬೇಕು ಇದೆ ನಮ್ಮ ಶರತ್ತು ಎಂದು ಸನ್ಯಾಸಿಗಳು ಕೇಳಿದರು.
ಅನುಸೂಯಾ ದೇವಿಯು ವಿಚಲಿತಳಾಗದೇ ಕುಟೀರದ ಒಳಗಿನಿಂದ ಪತಿಯ ಕಮಂಡಲವನ್ನು ತಂದು ಮಂತ್ರಿಸಿದ ನೀರಿನಿಂದ ಮೂವರು ಸನ್ಯಾಸಿಗಳಿಗೆ ಪೆÇ್ರೀಕ್ಷಣೆ ಮಾಡಿ ಅವರುಗಳನ್ನು ಪುಟ್ಟ ಮಕ್ಕಳನ್ನಾಗಿ ಮಾಡಿ ಅವರಿಗೆ ತಮ್ಮ ಮೊಲೆ ಹಾಲನ್ನು ಹುಟ್ಟುಡುಗೆಯಿಂದಲೇ ಉಣಿಸಿದಳು. ಅತ್ರಿ ಋಷಿಗಳು ಬಂದ ಮೇಲೆ ಎಲ್ಲಾ ವೃತ್ತಾಂತವನ್ನು ಅರುಹಿದಳು. ತಮ್ಮ ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ತಿಳಿದಳು ಮೂವರೂ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕ ತೊಡಗಿದರು. ಎಷ್ಟೇ ದಿವಸವಾದರೂ ಹಿಂದಿರುಗದ ಪತಿಯನ್ನು ಹುಡುಕಿಕೊಂಡು ಲಕ್ಷ್ಮಿ ಪಾರ್ವತಿ ಸರಸ್ವತಿಯರು ಅತ್ರಿ ಆಶ್ರಮಕ್ಕೆ ಬಂದು ಮಕ್ಕಳ ರೂಪದಲ್ಲಿರುವ ಪತಿಯರನ್ನು ಕಂಡು ಋಷಿ ಮತ್ತು ಋಷಿ ಪತ್ನಿಯಲ್ಲಿ ಕ್ಷಮೆಯಾಚಿಸಿದರು.
ಪುನಃ ಅವರ ರೂಪವನ್ನು ನೀಡೆಂದು ಪ್ರಾರ್ಥಿಸಿದರು. ಅನುಸೂಯಾದೇವಿಯು ಮೂವರನ್ನು ಮೂಲರೂಪದಲ್ಲಿ ಬರುವಂತೆ ಮಾಡಿದಳು. ಋಷಿ ಮತ್ತು ಋಷಿ ಪತ್ನಿಗೆ ಆಶೀರ್ವದಿಸಲು ತ್ರಿಮೂರ್ತಿಗಳು ದತ್ತಾತ್ರೇಯ ರೂಪದಲ್ಲಿ ಅತ್ರಿ ಋಷಿಗಳ ಮನೆಯಲ್ಲಿ ಜನಿಸಿದರು. ದತ್ತಾತ್ರೇಯ ಜನನು ಮಾರ್ಗಶೀರ್ಷ ಮಾಸದ ಹುಣ್ಣಿಮೆಯಂದು ಆಗುತ್ತದೆ. ಅಂದು ದತ್ತ ಜಯಂತಿಯನ್ನು ಆಚರಿಸಲಾಗುತ್ತದೆ. ದತ್ತಾತ್ರೇಯರನ್ನು ತ್ರಿಮೂರ್ತಿಗಳ ಅವತಾರ ಎಂದರೂ ಕೂಡ ಮುಖ್ಯವಾಗಿ ವಿಷ್ಣುವಿನ ಅಂಶವೇ ಇರುವುದು ಎಂದು ಭಾವಿಸಲಾಗುತ್ತದೆ.
ಭಾರತದ ಅನೇಕ ರಾಜ್ಯಗಳಲ್ಲಿ ದತ್ತ ಪೀಠಗಳಿವೆ. ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಗುಜರಾತ ಮಧ್ಯ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದ ದತ್ತನ ಆರಾಧಕರು ಇರುತ್ತಾರೆ. ಬ್ರಹ್ಮ ಪುರಾಣ, ಗರುಡ ಪುರಾಣ ಸತ್ ತತ್ವ ಸಂಹಿತ ಮತ್ತು ಕೆಲವು ಉಪನಿಷತ್ತುಗಳಲ್ಲಿ ಕೂಡ ದತ್ತಾತ್ರೇಯನ ಉಲ್ಲೇಖ ದೊರಕುತ್ತದೆ.
ದತ್ತಾತ್ರೇಯನು 12000 ವರ್ಷಗಳಕಾಲ ತಪಸ್ಸನ್ನು ಮಾಡಿದನು. 24 ಪ್ರಕೃತಿಯ ತತ್ವಗಳಿಂದ ಶಿಕ್ಷಣವನ್ನು ಪಡೆದನು.ದತ್ತನ ಅನುಯಾಯಿಗಳು ಮತ್ತು ಪೀಠಗಳು: ದತ್ತ ಸಂಪ್ರದಾಯವನ್ನು ಅನುಸರಿಸುವವರು ನಾಥ ಸಂಪ್ರದಾಯದವರು, ಅವಧೂತ ಸಂಪ್ರದಾಯದವರು,ದಾಸನಾಮಿ ಅಥವಾ ಶಕ್ತಿ ಸಂಪ್ರದಾಯದವರು, ಭಕ್ತಿ ಸಂಪ್ರದಾಯದವರ, ಮಹಾನನುಭವ ಸಪ್ರದಾಯದವರು, ಗುರುಚರಿತ್ರೆ ಸಂಪ್ರದಾಯದವರು, ಮಾಣಿಕ ಪ್ರಭು, ಮೊದಲಾದ ಸಂಪ್ರದಾಯವರು ಇದ್ದಾರೆ. ಭಾರತದಲ್ಲಿ 16 ಪ್ರಸಿದ್ಧ ದತ್ತ ಕ್ಷೇತ್ರಗಳು ಇವೆ.
ಕಾಲಾಗ್ನಿ ಶಮನ ದತ್ತಾತ್ರೇಯ – ಮೈಸೂರು, ಯೋಗಿರಾಜ ವಲ್ಲಭ ಪ್ರದ್ದತ್ತೂರು, ದತ್ತ ಯೋಗಿರಾಜ – ಬೆಂಗಳೂರು, ಜ್ಞಾನ ಸಾಗರ ದತ್ತಾತ್ರೇಯ- ಅನಂತಪುರ, ಶ್ಯಾಮಕಮಲ ಲೋಚನ ದತ್ತಾತ್ರೇಯ , ಅತ್ರಿ ವರದ ದತ್ತಾತ್ರೇಯ- ಮಚಲಿಪಟ್ಟಣಮ್, ಸಂಸ್ಕಾರ ಹೀನ ಶಿವರೂಪ ದತ್ತಾತ್ರೇಯ- ಅನಂತಪುರ, ಆದಿಗುರು ದತ್ತಾತ್ರೇಯ – ಚೆನ್ನೈ, ದಿಗಂಬರ ದತ್ತ – ಹೃಷಿಕೇಶ, ವಿಶ್ವಾಂಬರವದೂತ ದತ್ತಾತ್ರೇಯ – ಅಕಿವಿಡು, ದೇವ ದೇವ ದತ್ತಾತ್ರೇಯ – ನುಜ್ವಿಡ್, ದತ್ತಾವಧೂತ – ಹೈದರಾಬಾದ್, ದತ್ತ ದಿಗಂಬರ – ಗುಡಿಗುಂಟ, ಸಿದ್ಧರಾಜ ದತ್ತಾತ್ರೇಯ ಕೊಚಿ, ಮಾಯಾ ಮುಕ್ತ ಅವಧೂತ ದತ್ತಾತ್ರೇಯ – ಆಚಾರ ಪಕ್ಕಮ್ , ಲೀಲಾ ವಿಶ್ವಾಂಬರ ದತ್ತಾತ್ರೇಯ -ಸೂರತ್ ಕರ್ನಾಟಕದ ಪ್ರಸಿದ್ಧ ಮತ್ತು ಹಳೆಯ ಪೀಠಗಳು ಗಾಣಘಾಪುರ ಮತ್ತು ಚಿಕ್ಕಮಗಳೂರಿನ ಬಾಬಾ ಬುಡನ್ಗಿರಿಯ ದತ್ತಪೀಠ
ದತ್ತ ಜಯಂತಿ ಆಚರಣೆ: ದತ್ತ ಜಯಂತಿಯು ಬಹಳಷ್ಟು ಭಾರತಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಏಳು ದಿನ ಮೊದಲಿನಿಂದ ಭಕ್ತರು ಗುರುಚರಿತ್ರೆಯ ಪಾರಾಯಣವನ್ನು ಮಾಡುತ್ತಾರೆ. ನಂತರ ದತ್ತ ಜಯಂತಿಯ ದಿನದಂದು ಪೂಜೆ ಸಂಕೀರ್ತನೆಗಳನ್ನು ಮಾಡಿ ತೀರ್ಥ ಪ್ರಸಾದಗಳನ್ನು ಸ್ವೀಕರಿಸುತ್ತಾರೆ. ಇನ್ನು ಹಲವರು ಉಪವಾಸವನ್ನು ಮಾಡುತ್ತಾರೆ.
ದತ್ತನ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ನದಿ ಅಥವಾ ಪವಿತ್ರ ತೀರ್ಥ ಸ್ನಾನವನ್ನು ಮಾಡುತ್ತಾರೆ. ಅಂದು ತಮ್ಮದೇ ದತ್ತನ ದೇವಾಲಯಕ್ಕೆ ಭೇಟಿಯನ್ನು ನೀಡುತ್ತಾರೆ. ಧೂಪ ದೀಪ ಕರ್ಪೂರ ವಿಶೇಷ ಹೂವುಗಳಿಂದ ದತ್ತನ ಪೂಜೆಯನ್ನು ಮಾಡಲಾಗುತ್ತದೆ. ಅನೇಕ ಸಿಹಿ ತಿನಿಸುಗಳು ಹಣ್ಣುಗಳು ಮತ್ತು ಅಡುಗೆಯನ್ನು ಮಾಡಿ ನಿವೇದಿಸಲಾಗುತ್ತದೆ. ದತ್ತನ ವಿಗ್ರಹವನ್ನು ರಥೋತ್ಸವದಲ್ಲಿ ನಗರ ಸಂಕೀರ್ತನೆಯ ಜೊತೆಗೆ ಮೆರವಣಿಗೆ ಮಾಡುತ್ತಾರೆ. ಆಲಯದಲ್ಲಿ ಪಲ್ಲಕ್ಕಿ ಉತ್ಸವವನ್ನು ಮಾಡುತ್ತಾರೆ. ವಿಶೇಷವಾಗಿ ಅವಧೂತ ಗೀತೆ ಮತ್ತು ಜೀವನ್ಮುಕ್ತಗೀತೆಗಳನ್ನು ಪಠಿಸುತ್ತಾರೆ. ದತ್ತನಿಗೆ ಹಳದಿ ವಸ್ತ್ರ ಮತ್ತು ಹಳದಿ ಹೂವುಗಳು ಪ್ರಿಯವಾದವು. ಹಳದಿ ಬಣ್ಣದ ಸಿಹಿ ತಿನಿಸುಗಳನ್ನು ದತ್ತನಿಗೆ ಅರ್ಪಿಸಲಾಗುತ್ತದೆ.
ಜ್ಞಾನ ಭಕ್ತಿ ಹಾಗೂ ವೈರಾಗ್ಯ ಪ್ರಾಪ್ತಿಗಾಗಿ ದತ್ತಾತ್ರೇಯನ ಉಪಾಸನೆಯನ್ನು ಮಾಡುತ್ತಾರೆ. ದತ್ತರ ಆರಾಧನೆಯು ಸಕಲ ಸಂಪತ್ತು ಸಮೃದ್ಧಿಯನ್ನು ನೀಡುವುದರ ಜೊತೆಗೆ ಭಗವಂತನ ಜ್ಞಾನವನನು ಕೂಡ ನೀಡುತ್ತದೆ. ದತ್ತನ ಪೂಜೆಯನ್ನು ದತ್ತ ಜಯಂತಿಯ ಸಮಯದಲ್ಲಿ ಗುರುಚರಿತ್ರೆಯ ಪಾರಾಯಣವನ್ನು ಮಾಡಿ ಭಕ್ತಿಯಿಂದ ಪೂಜಿಸುವವರಿಗೆ ಸಂಪತ್ತು , ಸಮೃದ್ಧಿಗಳು ಲಭಿಸುತ್ತವೆ. ವಿವಾಹ ಆಗದೇ ಇರುವವರಿಗೆ ವಿವಾಹವಾಗುತ್ತದೆ. ದೈಹಿಕ ಕಾಯಿಲೆಗಳು ಪರಿಹಾರವಾಗುತ್ತದೆ.