ಬೆಂಗಳೂರು: ನವಂಬರ್ 19 ರಂದು ಸಿದ್ದಯ್ಯ ರಸ್ತೆಯಲ್ಲಿರುವ ಸಿಟಿ ಯೂನಿಯನ್ ಬ್ಯಾಂಕ್ ಬಿಲ್ಡಿಂಗ 4ನೇ ಮಹಡಿಯಲ್ಲಿ ವಾಸವಾಗಿದ್ದ ಶ್ರೀರಾಮ್ ಪ್ರಸಾದ್ ಪಂಡಿತ್ ಎಂಬುವರಮನೆಗೆ ಅಪರಿಚಿತ ವ್ಯಕ್ತಿಗಳು ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ನಗದು ಸೇರಿದಂತೆ ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿ ಹೋಗಿದ್ದರು.
ಈ ಸಂಬಂಧ ಪಂಡಿತರವರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಕಲಾಸಿಪಾಳ್ಯ ಪೊಲೀಸರು ಈ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಐದು ಜನ ಆರೋಪಿಗಳನ್ನು ಬಂಧಿಸಿ 11 ಲಕ್ಷ 30,000 ರೂ ನಗದು ಮತ್ತು 6 ಲಕ್ಷ ರೂ ಬೆಲೆಬಾಳುವ ಮೊಬೈಲ್ ಫೋನುಗಳು ಮತ್ತು ಮೋಟರ್ ಸೈಕಲ್ ಹಾಗೂ ಕಾರನ್ನು ವಶಪಡಿಸಿಕೊಂಡಿರುತ್ತಾರೆ.
25), ಷಜಾದ್ ಪಾಷಾ(23), ಮೊಹಮ್ಮದ್ ಮಯಾಜ್(25), ಯಾಸಿನ್ ಅಹಮದ್ ಷರೀಫ್(19) ಮತ್ತು ಶಾಹಿಬ್ ಪಾಷಾ (19) ಎಂಬ ಆರೋಪಿಗಳನ್ನು ಬಂಧಿಸಿರುತ್ತಾರೆ.