ಬೆಂಗಳೂರು: ದರ್ಶನ್ಗೆ ಮನೆಯೂಟಕ್ಕೆ ಅನುಮತಿ ಸಿಗುತ್ತಾ ಅಥವಾ ಜೈಲೂಟವೇ ಗಟ್ಟಿಯಾಗುತ್ತಾ ಎಂಬುದು ಇಂದು ನಿರ್ಧಾರವಾಗಲಿದೆ.ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿಂದು ನಟ ದರ್ಶನ್ ಮನೆ ಊಟದ ಅರ್ಜಿ ವಿಚಾರಣೆ ನಡೆಯಲಿದೆ. ವಿಚಾರಣೆ ಸಂದರ್ಭದಲ್ಲಿ ಇವತ್ತು ಸ್ಪೆಷಲ್ ಎಸ್ಪಿ ಪಿ ಅವರು ಆಕ್ಷೇಪಣೆ ಸಲ್ಲಿಕೆ ಮಾಡಲಿದ್ದಾರೆ.
24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಜೈಲಾಧಿಕಾರಿಗಳಿಂದಲೂ ಇವತ್ತು ಕೋರ್ಟ್ ಗೆ ದರ್ಶನ್ ಹೆಲ್ತ್ ರಿಪೋರ್ಟ್ ಸಲ್ಲಿಕೆಯಾಗಲಿದೆ. ಇವತ್ತು ಹೆಲ್ತ್ ರಿಪೋರ್ಟ್ ಸಲ್ಲಿಕೆ ಮಾಡಲು ಕೋರ್ಟ್ ಸೂಚಿಸಿದ್ದ ಹಿನ್ನನೆಲಯಲ್ಲಿ ಜೈಲಾಧಿಕಾರಿಗಳು ಕೊಡುವ ರಿಪೋರ್ಟ್ ನ್ನ ಗಂಭೀರವಾಗಿ ಪರಿಗಣಿಸೋ ಸಾಧ್ಯತೆ.ಜುಲೈ 27 ರೊಳಗೆ ಅರ್ಜಿ ಬಗ್ಗೆ ತೀರ್ಮಾನಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹೈಕೋರ್ಟ್ ಸೂಚನೆ ನೀಡಿದೆ.