ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಈ ತಿಂಗಳ 28ಕ್ಕೆ ಮುಂದೂಡಲಾಗಿದೆ.ಇಂದು ರಾಜ್ಯ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದು ನ್ಯಾಯಮೂರ್ತಿ ಎಸ್. ವಿಶ್ವಜಿತ್
ಶೆಟ್ಟಿ ಅವರು ವಿಚಾರಣೆ 28ಕ್ಕೆ ಮುಂದೂಡಿದ್ದಾರೆ.
ಬೆಳಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ದರ್ಶನ್ ಅವರಿಗೆ ಬೆನ್ನು ನೋವಿಗೆ ಸರ್ಜರಿ ನಡೆಸುವ ಅವಶ್ಯಕತೆ ಇದೆ ಮಧ್ಯಂತರ ಜಾಮೀನು ನೀಡಲು ಮನವಿ ಮಾಡಿದರು. ಸಿಟಿ ಸ್ಕ್ಯಾನ್ ಮಾಡಿದಾಗ ಸರ್ಜರಿ ಅವಶ್ಯಕತೆ ಇದೆ ಎಂದಿದ್ದಾರೆ ಎಂದು ಕೋರ್ಟ್ಗೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ನ್ಯಾಯಾದೀಶರು ದರ್ಶನ್ ಇರುವ ಜೈಲಧಿಕಾರಿಗಳಿಗೆ ವೈದ್ಯಕೀಯ ವರದಿ ದಾಖಲೆಗಳನ್ನು ಸಲ್ಲಿಕೆ ಮಾಡಲು ಸೂಚಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ.