ಯಲಹಂಕ: ದಿನಾಂಕ 12-10-2024 ಶನಿವಾರದಂದು ದಸರಾ ಹಬ್ಬದ ಪ್ರಯುಕ್ತ ಯಲಹಂಕ ಉಪನಗರ 4ನೇ ಹಂತದಲ್ಲಿರುವ ಶಿವಮಂದಿರದಲ್ಲಿ ಉತ್ತರ ಕರ್ನಾಟಕ ಕ್ಷೇಮಾವೃದ್ಧಿ ಸಂಘದ ವತಿಯಿಂದ ಬನ್ನಿ ಪೂಜೆ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ನೆರವೇರಿದೆ. ಜನಪ್ರಿಯ ಯಲಹಂಕ ಶಾಸಕರಾದ S ಖ ವಿಶ್ವನಾಥ್ ರವರು ಆಗಮಿಸಿ ಬನ್ನಿ ಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
ಎಲ್ಲಾ ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶಿವಶರಣಪ್ಪ ಮತ್ತು ಇತರ ಪದಾಧಿಕಾರಿಗಳು,ಸದಸ್ಯರು ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಮಂಡಳಿ ಅಧ್ಯಕ್ಷರಾದ ಶಿವಕುಮಾರ್ ಮೇಟಿ ಯವರು ಸಹ ಬಂದು ಬನ್ನಿ ಪೂಜೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ನೆರದಿದ್ದ ಯಲಹಂಕದ ಎಲ್ಲಾ ನಮ್ಮ ಉತ್ತರ ಕರ್ನಾಟಕದ ಮಂದಿ, ಆತ್ಮೀಯರು, ಅಭಿಮಾನಿಗಳು, ಸಮಸ್ತರೂ ಸಂತಸಪಟ್ಟಿದ್ದಾರೆ.