ಪೀಣ್ಯ,ದಾಸರಹಳ್ಳಿ: ‘ದಾಸರಹಳ್ಳಿ ಕ್ಷೇತ್ರ ನನ್ನ ಕರ್ಮಭೂಮಿ. ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ. ಹಾಗಾಗಿ ಕ್ಷೇತ್ರದ ಎಲ್ಲಾ ಕಡೆ ಜನಗಳಿಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುತ್ತಿದೆ’, ಎಂದು ಶಾಸಕ ಮುನಿರಾಜು ಹೇಳಿದರು.
ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಕೆರೆಗುಡ್ಡದಹಳ್ಳಿ ಮುಖ್ಯರಸ್ತೆ, ಮಾರುತಿ ಲಿಂಕ್ ಹತ್ತಿರ, ಕಾವೇರಿ ಲೇಔಟ್, ಎಂಬ್ರಡ್ ಎನ್ಕ್ಲೇವ್, ಚನ್ನಕೇಶವ ದೇವಸ್ಥಾನ, ನಂದಿನಗರ 2ನೇ ಕ್ರಾಸ್, ಚಿಕ್ಕಬಾಣಾವರ ಪುರಸಭಾ ಕಚೇರಿ ಸಮೀಪದ ಐದನೇ ಅಡ್ಡರಸ್ತೆ, ತಮ್ಮೇನಹಳ್ಳಿ ಮುಖ್ಯ ರಸ್ತೆ, ರಾಘವೇಂದ್ರ ಬಡಾವಣೆಯ ಎರಡನೇ ಕ್ರಾಸ್, ಭೋಗೇಶಪ್ಪ ಬಡಾವಣೆಯ ಮೂರನೇ ಮತ್ತು ನಾಲ್ಕನೇ ಅಡ್ಡರಸ್ತೆಗಳಲ್ಲಿ ರಸ್ತೆ, ಚರಂಡಿ, ಡಚ್ ಲ್ಯಾಬ್, ಡೆಕ್ ಸ್ಲ್ಯಾಬ್, ಕೊಳವೆ ಬಾವಿ ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಮರಿಸ್ವಾಮಿ, ಮುಖಂಡರಾದ ಬಿ.ಎಂ ಚಿಕ್ಕಣ್ಣ, ಗಿರೀಶ್ ಕುಮಾರ್, ನವೀನ್ ಕುಮಾರ್, ಸುರೇಶ್ ಖಾಡೆ, ಪುರಸಭೆ ಮುಖ್ಯಾಧಿಕಾರಿ ಸಂದೀಪ್, ಹರೀಶ್ ಕುಮಾರ್, ಬಸವರಾಜು, ಇಂಜಿನಿಯರ್ ಗಳಾದ ಸುಮತಿ, ಸುಮ, ಪುನೀತ್, ನಾಗನ್ ಗೌಡ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.